ಹುಬ್ಬಳ್ಳಿ: ಸಿಲಿಂಡರ್ ಲೀಕ್ ಆಗಿ ಬ್ಲಾಸ್ಟ್ ಆದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಹಳೆ ಹುಬ್ಬಳ್ಳಿಯ ಅಯೋಧ್ಯಾ ನಗರದಲ್ಲಿ ನಡೆದಿದೆ.
ಮೋಹನ್ ಕಲಾಲ್ (40) ಮತ್ತು ಪ್ರವೀಣ್ ಕಲಾಲ್ (46) ಮೃತ ದುರ್ದೈವಿಗಳು. ಘಟನೆಯಲ್ಲಿ ಪ್ರವೀಣ್ ಕಲಾಲ್ ಸ್ಥಳದಲ್ಲಿಯೇ ಸಾವನ್ನಪ್ಪಿದರೇ, ಮೋಹನ್ ಕಲಾಲ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸುಮನ ಕಲಾಲ್ ಎಂಬ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ.
ಗ್ಯಾಸ್ ಲೀಕೇಜ್‌ನಿಂದ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಗಾಯಾಳು ಮಹಿಳೆಗೆ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಪ್ರವೀಣ್ ಕಲಾಲ್ ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದರು. ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ರಾಜ್ಯದ ವಿವಿಧ ಜೈಲುಗಳಲ್ಲಿ ಕಳೆದ 9 ತಿಂಗಳಲ್ಲಿ 410 ಮೊಬೈಲ್‌ಗಳು ಪತ್ತೆ; ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ 334 ಮೊಬೈಲ್ ಸೀಜ್
ಬೆಂಗಳೂರು: ರಾಜ್ಯದ ವಿವಿಧ ಜೈಲುಗಳಲ್ಲಿ ಪೊಲೀಸರು ನಡೆಸಿದ ದಾಲಿ, ಕಾರ್ಯಾಚರಣೆಯ ವೇಳೆ ಅಪಾರಪ್ರಮಾಣದ ಮೊಬೈಲ್ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕೈದಿಗಳು ಕಾರಾಗೃಹದಲ್ಲಿದ್ದುಕೊಂಡೇ ರಾಜಾರೋಷವಾಗಿ ಮೊಬೈಲ್ ಬಳಸುತ್ತಿದ್ದಾರೆ ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ.
ಕೈದಿಗಳಿಗೆ ಮೊಬೈಲ್ ನಿಷೇಧವಿದ್ದರೂ ಜೈಲುಗಳಲ್ಲಿರುವ ಕೈದಿಗಳ ಬಳಿ ಮೊಬೈಲ್ ಪತ್ತೆಯಾಗಿರುವುದು ಆತಂಕಕಾರಿ ಬೆಳವಣಿಗೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದಂತೆ ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಕಳೆದ 9 ತಿಂಗಳಲ್ಲಿ 410 ಮೊಬೈಲ್‌ಗಳು ಪತ್ತೆಯಾಗಿವೆ.
ಈ ಪೈಕಿ ಪರಪ್ಪನ ಅಗ್ರಹಾರ ಜೈಲಿನಲ್ಲೇ ಬರೋಬ್ಬರಿ 334 ಮೊಬೈಲ್ ಗಳು ಪತ್ತೆಯಾಗಿದ್ದು, ಅವುಗಳನ್ನು ಸೀಜ್ ಮಾಡಲಾಗಿದೆ. ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರು ಕಠಿಣ ನಿಯಮ ಜಾರಿ ಮಾಡಿರುವುದರಿಂದ ಅವರ ಅವಧಿಯಲ್ಲೇ ಜೈಲುಗಳಲ್ಲಿ ಹೆಚ್ಚು ಮೊಬೈಲ್ ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
2023ರಲ್ಲಿ 72 ಮೊಬೈಲ್ ಗಳು ಮತ್ತು 28 ಸಿಮ್ ಗಳು ಪತ್ತೆಯಾಗಿವೆ. 2024ರಲ್ಲಿ 104 ಮೊಬೈಲ್ ಹಾಗೂ 10 ಸಿಮ್ ಗಳು ಪತ್ತೆಯಾಗಿವೆ. 2025ರಲ್ಲಿ 148 ಮೊಬೈಲ್ ಹಾಗೂ 68 ಸಿಮ್ ಗಳು ಹಾಗೂ 2026ರಲ್ಲಿ 410 ಮೊಬೈಲ್ ಹಾಗೂ 228 ಸಿಮ್ ಗಳು ಪತ್ತೆಯಾಗಿವೆ. ಜೈಲಿನಲ್ಲಿ ವರ್ಷದಿಂದ ವರ್ಷಕ್ಕೆ ಮೊಬೈಲ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿವೆ.
ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರ ಅವಧಿಯಲ್ಲಿಯೇ ಹೆಚ್ಚು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ 6-7 ಮೊಬೈಲ್ ಅಷ್ಟೇ ಜೈಲಿನಲ್ಲಿ ಇರೋ ಸಾಧ್ಯತೆ ಇದೆ.

