HomeLatest Newsನಿಮ್ಮೂರಿನಲ್ಲೇ  ಸ್ವಂತ ‘ಗ್ರಾಮ ಒನ್ ಕೇಂದ್ರ’ ಆರಂಭಿಸುವುದು ಹೇಗೆ.? ಇಲ್ಲಿದೆ ಸಂಪೂರ್ಣ ಮಾಹಿತಿ

ನಿಮ್ಮೂರಿನಲ್ಲೇ  ಸ್ವಂತ ‘ಗ್ರಾಮ ಒನ್ ಕೇಂದ್ರ’ ಆರಂಭಿಸುವುದು ಹೇಗೆ.? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ನೀವು ಸ್ವಂತ ಗ್ರಾಮ ಒನ್ ಕೇಂದ್ರ ತೆರೆಯಬೇಕೆ..? ಇದನ್ನು ತೆರೆಯುವುದು ಹೇಗೆ..? ಏನೆಲ್ಲಾ ಪ್ರಕ್ರಿಯೆಗಳಿದೆ..ಇಲ್ಲಿದೆ ಸಂಪೂರ್ಣ ಮಾಹಿತಿ. ಮೊದಲು ನೀವು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು, ಕನಿಷ್ಠ 2ನೇ ಪಿಯುಸಿ ಪಾಸಾಗಿರಬೇಕು, 1-2 ಲಕ್ಷ ರೂ. ಹೂಡಿಕೆ ಸಾಮರ್ಥ್ಯ ಹೊಂದಿರಬೇಕು, ಮತ್ತು ಅಗತ್ಯ ದಾಖಲೆಗಳಾದ ಆಧಾರ್, ಪ್ಯಾನ್, ಬ್ಯಾಂಕ್ ಖಾತೆ ವಿವರ, ವಿಳಾಸದ ಪುರಾವೆಗಳನ್ನು ಹೊಂದಿರಬೇಕು. ಅರ್ಜಿ ಸಲ್ಲಿಸುವುದಕ್ಕಿಂತ ಮೊದಲು ಏನಾದರೂ ಅನುಮಾನವಿದ್ದರೆ ಸಂಬಂಧಪಟ್ಟ ಜಿಲ್ಲಾಡಳಿತ ಅಥವಾ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಬೇಕು.

ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಕನಿಷ್ಠ 2ನೇ ಪಿಯುಸಿ ಉತ್ತೀರ್ಣರಾಗಿರಬೇಕು.

ಏನೆಲ್ಲಾ ಬೇಕು.?
ಡೆಸ್ಕ್ಟಾಪ್/ಲ್ಯಾಪ್ಟಾಪ್
ಪ್ರಿಂಟರ್
ಇಂಟರ್ ನೆಟ್ ಸೌಲಭ್ಯ
ಬಯೋಮೆಟ್ರಿಕ್ ಸ್ಕ್ಯಾನರ್

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಾಖಲೆಗಳು..?
1) ಆಧಾರ್ ಕಾರ್ಡ್
2) ಪ್ಯಾನ್ ಕಾರ್ಡ್
3) ಶೈಕ್ಷಣಿಕ ಪ್ರಮಾಣ ಪತ್ರಗಳು
4) ಬ್ಯಾಂಕ್ ಪಾಸ್ಬುಕ್/ರದ್ದು ಚೆಕ್, ವಿಳಾಸ ಪುರಾವೆಗಳು.

ಹೂಡಿಕೆ : ಕನಿಷ್ಠ ₹1 ರಿಂದ ₹2 ಲಕ್ಷ ಬಂಡವಾಳದ ಸಾಮರ್ಥ್ಯ ಹೊಂದಿರಬೇಕು.
ಸೌಲಭ್ಯಗಳು: ಕೌಂಟರ್, ಆಪರೇಟರ್ ಕುರ್ಚಿ, ಗ್ರಾಹಕರಿಗಾಗಿ 4-5 ಕುರ್ಚಿಗಳು, ಉತ್ತಮ ಬೆಳಕು ಮತ್ತು ಗಾಳಿ, ಸಿಸಿಟಿವಿ, ಎಲ್ಸಿಡಿ ಟಿವಿ.

ಅರ್ಜಿ ಸಲ್ಲಿಕೆ ಹೇಗೆ..?

* ಹೆಚ್ಚಿನ ವಿವರಗಳಿಗಾಗಿ: ಗ್ರಾಮ ಒನ್ ಅಧಿಕೃತ ವೆಬ್ಸೈಟ್ https://www.karnatakaone.gov.in/Public/GramOneFranchiseeTermsKn ಭೇಟಿ ನೀಡಿ ಅಥವಾ ನಿಮ್ಮ ತಾಲೂಕು ಕಚೇರಿ/ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: ಅಧಿಕೃತ ಗ್ರಾಮ ಒನ್ ಪೋರ್ಟಲ್ಗೆ ಭೇಟಿ ನೀಡಿ

*ನೋಂದಣಿ: “ಈಗಲೇ ನೋಂದಾಯಿಸಿ” ಮೇಲೆ ಕ್ಲಿಕ್ ಮಾಡಿ , ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು OTP ಬಳಸಿ ಲಾಗಿನ್ ಮಾಡಿ.

*ಅರ್ಜಿ ನಮೂನೆಯನ್ನು ಭರ್ತಿ ಮಾಡಿ: ವೈಯಕ್ತಿಕ ವಿವರಗಳು, ವಿಳಾಸ ಮತ್ತು ಶೈಕ್ಷಣಿಕ ಅರ್ಹತೆಗಳನ್ನು ನಿಖರವಾಗಿ ನಮೂದಿಸಿ.

*ದಾಖಲೆಗಳನ್ನು ಅಪ್ಲೋಡ್ ಮಾಡಿ: ಆಧಾರ್, ಪ್ಯಾನ್ ಕಾರ್ಡ್, ಛಾಯಾಚಿತ್ರ ಮತ್ತು ಅಂಕಪಟ್ಟಿ ಮುಂತಾದ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.

*: ವಿವರಗಳನ್ನು ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಆನ್ಲೈನ್ನಲ್ಲಿ ಸಲ್ಲಿಸಿ.

ಅರ್ಹತಾ ಮಾನದಂಡಗಳು
• ಕಂಪ್ಯೂಟರ್ ಜ್ಞಾನ ಹೊಂದಿರುವ ಪಿಯುಸಿ II/ಡಿಪ್ಲೊಮಾ/ಐಟಿಐ/ಪದವಿ/ ಸ್ನಾತಕೋತ್ತರ ಪದವಿ ಯಾವುದೇ ವಿಭಾಗದಲ್ಲೂ ಕನಿಷ್ಟ ಅರ್ಹತೆ ಹೊಂದಿರಬೇಕು.
• ರೂ. 1 ರಿಂದ 2 ಲಕ್ಷ ಬಂಡವಾಳ ಹೂಡಿಕೆ ಮಾಡುವ ಸಾಮಾಥ್ರ್ಯವಿರಬೇಕು.
• ಗ್ರಾಮಒನ್ ಪೊಲೀಸ್ ತಪಾಸಣಾ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
• ಸಮುಚ್ಛಯವು ಕೇಂದ್ರ ಸ್ಥಾನದಲ್ಲಿರಬೇಕು ಮತ್ತು ಸಾರ್ವಜನಿಕರು ಸುಲಭವಾಗಿ ಸಂಪರ್ಕಿಸುವಂತಿರಬೇಕು (ದೊರೆಯುವಂತಿರಬೇಕು).

    ಷರತ್ತು ಮತ್ತು ನಿಬಂಧನೆಗಳು
    • ಗ್ರಾಮಒನ್ ಫ್ರ್ಯಾಂಚೈಸ್ ಯೋಜನೆಗೆ ಅರ್ಜಿ ಶುಲ್ಕಕ್ಕೆ ರೂ. 100 /- ಪಾವತಿಸಲು ನಾನು ಒಪ್ಪುತ್ತೇನೆ ಮತ್ತು ಅದನ್ನು ಮರುಪಾವತಿಸಲಾಗುವುದಿಲ್ಲ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ.
    • ಗ್ರಾಮಒನ್ ಫ್ರ್ಯಾಂಚೈಸ್ ಪ್ರಾಯೋಗಿಕ ಯೋಜನೆಗೆ ನನ್ನ ಅರ್ಜಿಯನ್ನು ಹೆಚ್ಚಿನ ಪರಿಗಣನೆಗೆ ಆಯ್ಕೆ ಮಾಡಿದರೆ, ಮರುಪಾವತಿಸಬಹುದಾದ ಭದ್ರತಾ ಠೇವಣಿ ಶುಲ್ಕಕ್ಕೆ ರೂ. 5000/- ಪಾವತಿಸಲು ನಾನು ಒಪ್ಪುತ್ತೇನೆ

    For Latest News Updates, Join Our Whatsapp Community🚩
    ranjith
    ranjith
    Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
    RELATED ARTICLES

    Most Popular