HomeLatest Newsಅಡುಗೆ ಮನೆಯಲ್ಲಿರುವ ಪ್ಲಾಸ್ಟಿಕ್ ಬಾಕ್ಸ್‌ಗಳ ಕಲೆ ತೆಗೆಯುವುದು ಹೇಗೆ....?

ಅಡುಗೆ ಮನೆಯಲ್ಲಿರುವ ಪ್ಲಾಸ್ಟಿಕ್ ಬಾಕ್ಸ್‌ಗಳ ಕಲೆ ತೆಗೆಯುವುದು ಹೇಗೆ….?

ಪ್ಲಾಸ್ಟಿಕ್ ಡಬ್ಬಿಗಳನ್ನು ನೀವು ಇಷ್ಟ ಪಟ್ಟು ತೆಗೆದುಕೊಂಡಿರಬಹುದು. ಆದರೆ ಖರೀದಿಸಿದ ಕೆಲವೇ ದಿನಗಳಲ್ಲಿ ಇವುಗಳಲ್ಲಿ ಕಲೆ ಕಾಣಿಸಿಕೊಂಡಿವೆಯೇ? ಖರೀದಿಸಿದ ವಾರದೊಳಗೆ ಮಬ್ಬಾಗಿದೆಯೇ? ಹಾಗಿದ್ದರೆ ಇಲ್ಲಿ ಕೇಳಿ.

ವಿನೆಗರ್ ನಿಂದ ನಿಮ್ಮ ಡಬ್ಬಿಯನ್ನು ಹೊಸದರಂತೆ ಮಾಡಬಹುದು. ಕೆಲವು ಜಿಡ್ಡುಗಳು ಡಬ್ಬಿಗೆ ಗಟ್ಟಿಯಾಗಿ ಅಂಟಿಕೊಂಡಿರಬಹುದು. ವಿನೆಗರ್ ಬಳಸಿ ಆ ಕಲೆಯನ್ನು ಹೋಗಲಾಡಿಸಬಹುದು.

ಅಡುಗೆ ಸೋಡಾದಿಂದಲೂ ಈ ಕಲೆ ದೂರ ಮಾಡಬಹುದು. ಬಿಸಿನೀರಿಗೆ ಆಡುಗೆ ಸೋಡಾ ಬೆರೆಸಿ ಅದನ್ನು ಪ್ಲಾಸ್ಟಿಕ್ ಡಬ್ಬಿಗೆ ಹಾಕಿಡಿ. ನೀರು ಕುಡಿಯುವಷ್ಟು ಬೆಚ್ಚಗಿದ್ದರೆ ಸಾಕು. ಬಳಿಕ ಬ್ರಶ್ ನಿಂದ ತಿಕ್ಕಿ ತೊಳೆದರೆ ಸಾಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬ್ಲೀಚಿಂಗ್ ಪೌಡರ್ ಹಾಕುವುದರಿಂದಲೂ ಕಲೆ ದೂರ ಮಾಡಬಹುದು. ಈ ಪೌಡರ್ ಬೆರೆಸಿದ ನೀರಿನಲ್ಲಿ ಸ್ವಲ್ಪ ಹೊತ್ತು ನಿಮ್ಮ ಡಬ್ಬಿಯನ್ನು ನೆನೆಸಿಡಿ. ಬಳಿಕ ತಿಕ್ಕಿ ತೊಳೆದರೆ ಕಲೆ ಇಲ್ಲವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular