HomeBeautyಕೂದಲು ಉದುರುವ ಸಮಸ್ಯೆ ತಡೆಯವುದು ಹೇಗೆ....? ಇಲ್ಲಿದೆ ಸಿಂಪಲ್ ಟಿಪ್ಸ್

ಕೂದಲು ಉದುರುವ ಸಮಸ್ಯೆ ತಡೆಯವುದು ಹೇಗೆ….? ಇಲ್ಲಿದೆ ಸಿಂಪಲ್ ಟಿಪ್ಸ್

ಕೂದಲು ಉದುರುವುದು ಇತ್ತೀಚೆಗೆ ಬಹುತೇಕ ಜನರನ್ನು ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆಯಾಗಿದೆ. ಧೂಳು, ಪೋಷಕಾಂಶದ ಕೊರತೆ, ಅನಾರೋಗ್ಯ, ಮಾನಸಿಕ ಒತ್ತಡ ಮುಂತಾದ ಕಾರಣಗಳಿಂದ ಕೂದಲು ಉದುರುತ್ತದೆ.

ಈ ಉಪಾಯ ಮಾಡಿದರೆ ಕೂದಲು ಉದುರುವುದನ್ನು ತಡೆಗಟ್ಟಿ, ದಟ್ಟವಾದ ಕೂದಲು ನಿಮ್ಮದಾಗಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಡಯಟ್‌ ಕಡೆ ಗಮನ ಕೊಡಿ. ಡಯಟ್‌ನಲ್ಲಿ ಮೀನು, ಹಾಲು, ಮೊಟ್ಟೆ ಸೇರಿಸುವುದರಿಂದ ಕೂದಲಿಗೆ ಅಗತ್ಯವಿರುವ ಪೋಷಕಾಂಶ ದೊರೆಯುತ್ತದೆ. ನಾನ್ ‌ವೆಜ್‌ ತಿನ್ನದವರು ಅಗಸೆ ಬೀಜ ತಿನ್ನುವುದು ಒಳ್ಳೆಯದು.

* ಕೂದಲಿಗೆ ಪೋಷಕಾಂಶ ನೀಡುವ ವಿಟಮಿನ್ ಎ ಇರುವ ಸೊಪ್ಪು, ಕ್ಯಾರೆಟ್‌ ತಿನ್ನಿ. ವಿಟಮಿನ್‌ ಇ, ಬಿ12 ಅವಶ್ಯಕ. ಈ ವಿಟಮಿನ್‌ಗಳ ಕೊರತೆಯಾಗದಂತೆ ನೋಡಿಕೊಳ್ಳಿ.

* ಹಾರ್ಮೋನ್‌ಗಳ ವ್ಯತ್ಯಾಸ ಉಂಟಾದಾಗ ಕೂದಲು ಉದುರುತ್ತದೆ. ಆದ್ದರಿಂದ ವಿಪರೀತ ಕೂದಲು ಉದುರುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

* ಧೂಮಪಾನ, ಮದ್ಯಪಾನ, ಅತ್ಯಧಿಕ ಕೆಫೀನ್ ಆಹಾರ ಸೇವನೆಯಿಂದ ದೂರವಿದ್ದರೆ ಕೂದಲಿನ ಆರೋಗ್ಯ ಹೆಚ್ಚುವುದು.

* ತಲೆಗೆ ಮಸಾಜ್ ಮಾಡುವುದು, ವಾರಕ್ಕೊಮ್ಮೆ ಈರುಳ್ಳಿ ರಸ ಹಾಕುವುದು, ತಲೆಹೊಟ್ಟು ಕಾಣಿಸಿದರೆ ಮೊಸರು ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ತಲೆಸ್ನಾನ ಮಾಡುವುದು ಮಾಡಬೇಕು.

* ಒದ್ದೆ ಕೂದಲನ್ನು ಡ್ರೈಯರ್‌ ಬಳಸಿ ಒಣಗಿಸಬೇಡಿ, ವಾತಾವರಣದ ಉಷ್ಣತೆಯಲ್ಲೇ ಕೂದಲು ಒಣಗಲು ಬಿಡಿ. ಒದ್ದೆ ಕೂದಲನ್ನು ಬಿಗಿದು ಕಟ್ಟಬೇಡಿ.

* ಕೂದಲಿಗೆ ರಾಸಾಯನಿಕ ಬಣ್ಣ ಹಚ್ಚುವುದು, ಕೂದಲನ್ನು ಸ್ಟ್ರೈಟ್ನಿಂಗ್ ಮಾಡುವುದು, ನಂತರ ಕರ್ಲಿಂಗ್‌ ಮಾಡುವುದು ಮಾಡ್ತಾ ಇರಬೇಡಿ. ಇದರಿಂದ ಕೂದಲಿಗೆ ಹಾನಿಯುಂಟಾಗುತ್ತದೆ.

* ತಲೆ ಬಾಚಲು ಸೂಕ್ತವಾದ ಬಾಚಣಿಕೆ ಬಳಸಿ.

For Latest News Updates, Join Our Whatsapp Community🚩
RELATED ARTICLES

Most Popular