HomeLatest Newsಮನೆಯಲ್ಲೆ ಹೀಗೆ ತಯಾರಿಸಿ ಸ್ವಾದಿಷ್ಟಕರ ಅವಕಾಡೊ 'ಮಿಲ್ಕ್ ಶೇಕ್'

ಮನೆಯಲ್ಲೆ ಹೀಗೆ ತಯಾರಿಸಿ ಸ್ವಾದಿಷ್ಟಕರ ಅವಕಾಡೊ ‘ಮಿಲ್ಕ್ ಶೇಕ್’

ಪೌಷ್ಟಿಕಾಂಶ ಭರಿತವಾದ ಅವಕಾಡೊ ಹಣ್ಣಿನ ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಬಣ್ಣ ಮತ್ತು ಸ್ವಾದದಿಂದಲೂ ಇಷ್ಟವಾಗುವ ಈ ಹಣ್ಣಿನಿಂದ ವಿವಿಧ ರೀತಿಯ ತಿನಿಸುಗಳನ್ನು ತಯಾರಿಸಬಹುದು. ಹಾಗೇ ಈ ಹಣ್ಣಿನ ಮಿಲ್ಕ್ ಶೇಕ್ ತಯಾರು ಮಾಡುವುದು ಹೇಗೆ ಅಂತ ತಿಳಿಯೋಣ.

ಅವಕಾಡೊ ಹಣ್ಣು – 1
ಹಾಲು – 1 ಕಪ್
ಬಾಳೆಹಣ್ಣು – 2
ಕೋಕೊ ಪುಡಿ – 1 ಚಮಚ
ಜೇನುತುಪ್ಪ – 2 ಚಮಚ
ಸಕ್ಕರೆ – 1/2 ಕಪ್
ಏಲಕ್ಕಿ ಪುಡಿ – 1 ಚಿಟಿಕೆ
ನೀರು – 1 ಲೋಟ
ಪಿಸ್ತಾ – 2 ಚಮಚ

ಮಾಡುವ ವಿಧಾನ
ಅವಕಾಡೊ ಹಣ್ಣಿನ ಸಿಪ್ಪೆ ಮತ್ತು ಬೀಜ ತೆಗೆದು ಕತ್ತರಿಸಿ ಮಿಕ್ಸಿಗೆ ಹಾಕಿ. ಜೊತೆಗೆ ಕೋಕೊ ಪುಡಿ, ಜೇನುತುಪ್ಪ, ಹಾಲು, ಬಾಳೆಹಣ್ಣು, ಏಲಕ್ಕಿ ಪುಡಿ ಸೇರಿಸಿ ನಯವಾದ ಪದರ ಬರುವವರೆಗೆ ರುಬ್ಬಿಕೊಳ್ಳಿ.

ನಂತರ ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ನಿಮಗೆ ಬೇಕಾದ ಹದಕ್ಕೆ ತಯಾರಿಸಿಕೊಳ್ಳಿ. ಈ ಅವಕಾಡೊ ಮಿಲ್ಕ್ ಶೇಕ್ ಮತ್ತು 2 ಐಸ್ ಕ್ಯೂಬ್ ಗಳನ್ನು ಗಾಜಿನ ಲೋಟಕ್ಕೆ ಹಾಕಿ ಅದರ ಮೇಲೆ ಹೆಚ್ಚಿದ ಪಿಸ್ತಾ ಉದುರಿಸಿ ಟೇಸ್ಟ್ ಮಾಡಲು ನೀಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular