ಒಂದು ಕಾಲದಲ್ಲಿ ಮಹಿಳೆಯರ ಋತುಸ್ರಾವ (ಪೀರಿಯಡ್ಸ್) ಬಗ್ಗೆ ಮಾತನಾಡುವುದಕ್ಕೂ ಅನೇಕರು ಹಿಂಜರಿಯುತ್ತಿದ್ದರು. ಆದರೆ ಇಂದು ಡಿಜಿಟಲ್ ಯುಗದಲ್ಲಿ ಪೀರಿಯಡ್ಸ್ ಹೈಜೀನ್ ಕುರಿತು ಸಾಕಷ್ಟು ಜಾಗೃತಿ ಮೂಡಿದೆ. ಇತ್ತೀಚಿನ ದಿನಗಳಲ್ಲಿ ಸ್ಯಾನಿಟರಿ ಪ್ಯಾಡ್ಗಳು, ಮೆನ್ಸ್ಟ್ರುವಲ್ ಕಪ್ಗಳು ಸೇರಿದಂತೆ ಹಲವು ಆಧುನಿಕ ಉತ್ಪನ್ನಗಳು ಲಭ್ಯವಿವೆ.
ಹೌದು. ಇಂದು ಸ್ಯಾನಿಟರಿ ಪ್ಯಾಡ್ಗಳು ಮತ್ತು ಮೆನ್ಸ್ಟ್ರುವಲ್ ಕಪ್ಗಳು ಮಹಿಳೆಯರ ಋತುಸ್ರಾವದ ಆರೈಕೆಯನ್ನು ಸುಲಭಗೊಳಿಸಿವೆ. ಆದರೆ ಇವು ಲಭ್ಯವಿಲ್ಲದ ಕಾಲದಲ್ಲಿ ಮಹಿಳೆಯರು ಯಾವ ವಿಧಾನ ಅನುಸರಿಸುತ್ತಿದ್ದರು ಎಂಬುದು ಅನೇಕರಿಗೆ ತಿಳಿದಿಲ್ಲ. ಚೀನಾದಲ್ಲಿ ಒಂದು ಕಾಲದಲ್ಲಿ ಮಹಿಳೆಯರು ಸೊಂಟಕ್ಕೆ ಕಟ್ಟುವ ಬಟ್ಟೆಯ ಬೆಲ್ಟ್ನಲ್ಲಿ ಮರದ ಬೂದಿಯನ್ನು ತುಂಬಿ ಬಳಸುತ್ತಿದ್ದರು ಎಂಬ ಕುತೂಹಲಕಾರಿ ಮಾಹಿತಿ ಇದೀಗ ವೈರಲ್ ಆಗಿರುವ ವೀಡಿಯೋ ಮೂಲಕ ಮತ್ತೆ ಚರ್ಚೆಗೆ ಬಂದಿದೆ.
ನಿಮಗೆ ಗೊತ್ತಾ..? ಸುಮಾರು 20ನೇ ಶತಮಾನದ ಅಂತ್ಯದವರೆಗೂ ಚೀನಾದ ಕೆಲವು ಭಾಗಗಳಲ್ಲಿ ಮಹಿಳೆಯರು ಪ್ಯಾಡ್ಗಳ ಬದಲಾಗಿ ಬೂದಿಯನ್ನು ಬಳಸುತ್ತಿದ್ದರು. ಹೌದು ಇದು ಅಚ್ಚರಿ ಎನಿಸಿದರೂ ಅದು ಸತ್ಯ. ಅದರ ಬಗ್ಗೆ ತಿಳಿಯೋಣ.
ಋತುಸ್ರಾವವು ಮಹಿಳೆಯರ ದೇಹದಲ್ಲಿ ನಡೆಯುವ ಸಹಜ ಜೈವಿಕ ಪ್ರಕ್ರಿಯೆ. ಇಂದಿನ ಬದಲಾಗುತ್ತಿರುವ ಜೀವನಶೈಲಿಗೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಸ್ಯಾನಿಟರಿ ಪ್ಯಾಡ್ಗಳು ಹಾಗೂ ಮೆನ್ಸ್ಟ್ರುವಲ್ ಕಪ್ಗಳು ಲಭ್ಯವಿದ್ದು, ಅವು ಮಹಿಳೆಯರಿಗೆ ಆರಾಮ ಮತ್ತು ಸ್ವಚ್ಛತೆಯನ್ನು ಒದಗಿಸುತ್ತವೆ. ಆದರೆ ಈ ಉತ್ಪನ್ನಗಳು ಲಭ್ಯವಿಲ್ಲದ ಕಾಲದಲ್ಲಿ ಮಹಿಳೆಯರು ಏನು ಬಳಸುತ್ತಿದ್ದರು? ಬಟ್ಟೆಗಳಿಗೆ ರಕ್ತದ ಕಲೆ ಬೀಳದಂತೆ ಯಾವ ವಿಧಾನ ಅನುಸರಿಸುತ್ತಿದ್ದರು ಎಂಬ ಪ್ರಶ್ನೆ ಅನೇಕರಲ್ಲಿ ಮೂಡಬಹುದು.
ಆ ಕಾಲದಲ್ಲಿ ಮಹಿಳೆಯರು ಹೆಚ್ಚು ದೈಹಿಕ ಶ್ರಮದ ಕೆಲಸಗಳನ್ನು ಮಾಡುತ್ತಿದ್ದರು. ಋತುಸ್ರಾವದ ಸಮಯದಲ್ಲೂ ತಮ್ಮ ದೈನಂದಿನ ಕೆಲಸಗಳಿಗೆ ಅಡ್ಡಿಯಾಗದಂತೆ ಕೆಲವು ಸಾಂಪ್ರದಾಯಿಕ ಹಾಗೂ ನೈಸರ್ಗಿಕ ವಿಧಾನಗಳನ್ನು ಅನುಸರಿಸುತ್ತಿದ್ದರು. ಅವುಗಳಲ್ಲಿ ಒಂದು ವಿಶಿಷ್ಟ ವಿಧಾನವೇ ಮೆನ್ಸ್ಟ್ರುವಲ್ ಬೆಲ್ಟ್ ಬಳಕೆ.
ಮೆನ್ಸ್ಟ್ರುವಲ್ ಬೆಲ್ಟ್
ಕೇಳಲು ಅಚ್ಚರಿಯಾಗಬಹುದು, ಆದರೆ ಚೀನಾದಲ್ಲಿ 20ನೇ ಶತಮಾನದ ಕೊನೆಯವರೆಗೂ ಕೆಲವು ಮಹಿಳೆಯರು ಕೈಯಿಂದ ತಯಾರಿಸಿದ ಮೆನ್ಸ್ಟ್ರುವಲ್ ಬೆಲ್ಟ್ಗಳನ್ನು ಬಳಸುತ್ತಿದ್ದರು. ಆ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ಗಳ ಬಗ್ಗೆ ಹೆಚ್ಚಿನ ಅರಿವು ಇರಲಿಲ್ಲ.ಈ ಬೆಲ್ಟ್ನಲ್ಲಿ ಬಟ್ಟೆಯಿಂದ ಮಾಡಿದ ಒಂದು ಸಣ್ಣ ಚೀಲವಿರುತ್ತಿತ್ತು. ಅದನ್ನು ಸೊಂಟಕ್ಕೆ ಕಟ್ಟಿಕೊಳ್ಳಲಾಗುತ್ತಿತ್ತು. ಆ ಚೀಲದೊಳಗೆ ಅಡುಗೆಗೆ ಬಳಸಿದ ಕಟ್ಟಿಗೆಯಿಂದ ಉಳಿಯುವ ಮರದ ಬೂದಿಯನ್ನು ತುಂಬಲಾಗುತ್ತಿತ್ತು. ರಕ್ತವನ್ನು ಹೀರಿಕೊಳ್ಳುವ ಗುಣವಿದೆ ಎಂಬ ನಂಬಿಕೆಯಿಂದ ಬೂದಿಯನ್ನು ಬಳಸುತ್ತಿದ್ದರು.
ಋತುಸ್ರಾವ ಮುಗಿದ ನಂತರ ಆ ಬೂದಿಯನ್ನು ಗಿಡಗಳಿಗೆ ಗೊಬ್ಬರವಾಗಿ ಬಳಸಲಾಗುತ್ತಿತ್ತು. ಬಟ್ಟೆಯ ಚೀಲವನ್ನು ನದಿಯ ನೀರಿನಲ್ಲಿ ಚೆನ್ನಾಗಿ ತೊಳೆದು, ಒಣಗಿಸಿ ಮತ್ತೆ ಬಳಸುತ್ತಿದ್ದರು.
ಈ ವಿಧಾನ ಆರೋಗ್ಯಕ್ಕೆ ಸುರಕ್ಷಿತವೇ ?
ಇದು ಇತಿಹಾಸದಲ್ಲಿ ಬಳಕೆಯಲ್ಲಿದ್ದ ಒಂದು ವಿಧಾನವಾಗಿದ್ದರೂ, ಆರೋಗ್ಯದ ದೃಷ್ಟಿಯಿಂದ ಇದು ಸುರಕ್ಷಿತವಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ.
ರಿಸರ್ಚ್ಗೇಟ್ (ResearchGate) ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಮರದ ಬೂದಿಯಲ್ಲಿರುವ ಕೆಲವು ರಾಸಾಯನಿಕ ಅಂಶಗಳು ಹಾಗೂ ಅಶುದ್ಧ ಪದಾರ್ಥಗಳು ಯೋನಿಯ ಸಹಜ ವಾತಾವರಣವನ್ನು ಹಾಳುಮಾಡುವ ಸಾಧ್ಯತೆ ಇದೆ. ಇದರಿಂದ ಯೋನಿಯ ಪಿಎಚ್ (pH) ಮಟ್ಟದಲ್ಲಿ ವ್ಯತ್ಯಾಸ ಉಂಟಾಗಿ, ಈಸ್ಟ್ ಸೋಂಕು, ಬ್ಯಾಕ್ಟೀರಿಯಲ್ ವ್ಯಾಜಿನೋಸಿಸ್ ಸೇರಿದಂತೆ ವಿವಿಧ ಸೋಂಕುಗಳ ಅಪಾಯ ಹೆಚ್ಚಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.ಆದ್ದರಿಂದ ಇಂದಿನ ಕಾಲದಲ್ಲಿ ಲಭ್ಯವಿರುವ ಸ್ಯಾನಿಟರಿ ಪ್ಯಾಡ್ಗಳು, ಮೆನ್ಸ್ಟ್ರುವಲ್ ಕಪ್ಗಳು ಮತ್ತು ಇತರ ಸ್ವಚ್ಛತಾ ಉತ್ಪನ್ನಗಳು ಮಹಿಳೆಯರ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.
Shared post on Time

