HomeLatest NewsSHOCKING : ಬೆಂಗಳೂರಲ್ಲಿ ಭೀಮನ ಅಮಾವಾಸ್ಯೆ ದಿನವೇ 'ಗೃಹಿಣಿ' ನಿಗೂಢ ಸಾವು : ವರದಕ್ಷಿಣೆ ಕಿರುಕುಳ...

SHOCKING : ಬೆಂಗಳೂರಲ್ಲಿ ಭೀಮನ ಅಮಾವಾಸ್ಯೆ ದಿನವೇ ‘ಗೃಹಿಣಿ’ ನಿಗೂಢ ಸಾವು : ವರದಕ್ಷಿಣೆ ಕಿರುಕುಳ ಆರೋಪ.!

ಬೆಂಗಳೂರು : ಬೆಂಗಳೂರಿನಲ್ಲಿ ಭೀಮನ ಅಮಾವಾಸ್ಯೆ ದಿನವೇ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.ಬೆಂಗಳೂರಿನ ಮಾದನಾಯಕನಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮೃತ ಮಹಿಳೆಯನ್ನು ಸ್ಪಂದನಾ (24) ಎಂದು ಗುರುತಿಸಲಾಗಿದೆ. ಮಹಿಳೆ ಸಾವಿಗೆ ವರದಕ್ಷಿಣೆ ಕಿರುಕುಳ ಕಾರಣ ಎಂದು ಸ್ಪಂದನಾ ಕುಟುಂಬಸ್ಥರು ಆರೋಪಿಸಿದ್ದಾರೆ.

ಪೋಷಕರ ವಿರೋಧದ ನಡುವೆ ಸ್ಪಂದನಾ ಅಭಿಷೇಕ್ ಜೊತೆ ಮದುವೆ ಆಗಿದ್ದರು. ಕಾಲೇಜಿಗೆ ಹೋಗುತ್ತಿದ್ದ ಸಮಯದಲ್ಲೇ ಅಭಿಷೇಕ್ ನನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇದೀಗ ಅನುಮಾನಾಸ್ಪದವಾಗಿ ಮಹಿಳೆ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪತಿ ಹಾಗೂ ಕುಟುಂಬಸ್ಥರ ವಿರುದ್ಧ ಸ್ಪಂದನಾ ಪೋಷಕರು ಈ ಆರೋಪ ಮಾಡಿದ್ದು, ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಬೇಕಿದೆ. ಅಭಿಷೇಕ್ ಎಂಬಾತನ ಜೊತೆ ಸ್ಪಂದನಾ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಮದುವೆ ನಂತರ ಪತಿ ಅಭಿಷೇಕ್ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದನುತಂದೆ ಚಂದ್ರಗೆ ಕರೆ ಮಾಡಿದ್ದ ಸ್ಪಂದನಾ ಈ ವಿಷಯ ತಿಳಿಸಿದ್ದರು. ನಂತರ 4 ಲಕ್ಷ ಕೊಟ್ಟು ರಾಜಿ ಸಂಧಾನ ಕೂಡ ಮಾಡಿದ್ದರು. ಆದರೂ ಪತಿ ಅಭಿಷೇಕ್ ಕಿರುಕುಳ ನೀಡಿದ್ದಾನೆ ಎಂದು ಸ್ಪಂದನಾ ಪೋಷಕರು ಆರೋಪಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular