HomeKarnatakaಶಾಲೆಗಳ ಬಳಿ ಜಂಕ್ ಫುಡ್ ಮಾರಾಟ ನಿಷೇಧ ಬೆನ್ನಲ್ಲೇ ಆರೋಗ್ಯ ಇಲಾಖೆಯಿಂದ ಮತ್ತೊಂದು ಮಹತ್ವದ ಆದೇಶ:...

ಶಾಲೆಗಳ ಬಳಿ ಜಂಕ್ ಫುಡ್ ಮಾರಾಟ ನಿಷೇಧ ಬೆನ್ನಲ್ಲೇ ಆರೋಗ್ಯ ಇಲಾಖೆಯಿಂದ ಮತ್ತೊಂದು ಮಹತ್ವದ ಆದೇಶ: ಹೋಟೆಲ್ ಗಳಲ್ಲಿ ಕುಡಿಯಲು ಬಿಸಿ ನೀರು ಕಡ್ಡಾಯ

ಬೆಂಗಳೂರು: ಕೆಲ ದಿನಗಳ ಹಿಂದೆ ರಾಜ್ಯ ಆರೋಗ್ಯ ಇಲಾಖೆ ಶಾಲೆಗಳ ಸುತ್ತಮುತ್ತ ಜಂಕ್ ಫುಡ್ ಮಾರಾಟಕ್ಕೆ ನಿಷೇಧ ಹೇರಿ ಕ್ರಮ ಕೈಗೊಂಡಿತ್ತು. ಇದರ ಬೆನ್ನಲ್ಲೇ ಆರೋಗ್ಯ ಸಚಿವ ಯು.ಟಿ.ಖಾದರ್ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.

ಕುಡಿಯುವ ನೀರು ಇನ್ನಷ್ಟು ಶುದ್ಧವಾಗಿ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲಾ ಹೋಟೆಲ್ ಗಳಲ್ಲಿ ಗ್ರಾಹಕರಿಗೆ ಕುಡಿಯಲು ಬಿಸಿ ನೀರನ್ನು (Hot Water) ಕೊಡುವುದು ಕಡ್ಡಾಯ ಎಂಬ ನಿಯಮ ತರಲು ಆರೋಗ್ಯ ಇಲಾಖೆ ಮುಂದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಲ್ಲಾ ಪ್ರೀಮಿಯಮ್ ಹಾಗೂ ಸ್ಟ್ಯಾಂಡರ್ಡ್ ಹೋಟೆಲ್​ಗಳಲ್ಲಿ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಇದೆ. ಇದನ್ನ ಎಲ್ಲಾ ರೀತಿಯ ಅಂದರೆ, ಸಣ್ಣ-ಪುಟ್ಟ ಹೋಟೆಲ್​ಗಳಲ್ಲೂ ಕಡ್ಡಾಯ ಮಾಡಬೇಕಿದೆ ಎನ್ನುವುದು ಆರೋಗ್ಯ ಸಚಿವ ಯುಟಿ ಖಾದರ್​​ ಅವರ ತೀರ್ಮಾನ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಹೋಟೆಲ್ ಮಾಲೀಕರು ಒಳ್ಳೆಯ ನಿರ್ಧಾರ ಎಂದಿದ್ದಾರೆ. ಇತ್ತ ಗ್ರಾಹಕರು ಕೂಡ ಈ ನಿರ್ಧಾರವನ್ನ ಸ್ವಾಗತಿಸಿದ್ದಾರೆ.

ಕಲುಷಿತ ನೀರಿನ ಸೇವನೆಯಿಂದಾಗಿ ನಾನಾ ರೀತಿಯ ಖಾಯಿಲೆಗಳಿಗೆ ಜನಸಾಮಾನ್ಯುರು ತುತ್ತಾಗುತ್ತಿದ್ದಾರೆ. ಹೀಗಾಗಿ ಇದಕ್ಕೆಲ್ಲಾ ಕಡಿವಾಣ ಹಾಕಲು ನಿರ್ಧರಿಸಿರುವ ಆರೋಗ್ಯ ಎಲ್ಲಾ ರೀತಿಯ ಹೋಟೆಲ್​ಗಳಲ್ಲಿ ಗ್ರಾಹಕರಿಗೆ ಕುಡಿಯಲು ಬಿಸಿ ನೀರನ್ನ ಕೊಡುವುದು ಕಡ್ಡಾಯ ಮಾಡುತ್ತಿದೆ.

ಈಗಾಗಲೇ ಕೆಲ ಹೋಟೆಗಳಲ್ಲಿ ಗ್ರಾಹಕರಿಗಾಗಿ ಬಿಸಿ ನೀರು ನೀಡಲಾಗುತ್ತಿದೆ. ಆದ್ರೆ, ಇದನ್ನು ಎಲ್ಲಾ ಹೋಟೆಗಳಲ್ಲಿ ಕಡ್ಡಾಯಗೊಳಿಸಲು ಆರೋಗ್ಯ ಇಲಾಖೆ ತೀರ್ಮಾನಿಸಿದ್ದು, ಜನಸಾಮನ್ಯರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ನಿರ್ಧಾರ ಕೈಗೊಳ್ಳುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular