HomeIndiaಆಸ್ಪತ್ರೆಯಲ್ಲಿ ಹೆಲ್ಮೆಟ್ ಕದ್ದು ಪರಾರಿಯಾದ ಮಹಿಳೆ: ಸಿಸಿಟಿವಿ ದೃಶ್ಯ ವೈರಲ್ ಆಗ್ತಿದ್ದಂತೆ ಕಾದಿತ್ತು ಶಾಕ್!

ಆಸ್ಪತ್ರೆಯಲ್ಲಿ ಹೆಲ್ಮೆಟ್ ಕದ್ದು ಪರಾರಿಯಾದ ಮಹಿಳೆ: ಸಿಸಿಟಿವಿ ದೃಶ್ಯ ವೈರಲ್ ಆಗ್ತಿದ್ದಂತೆ ಕಾದಿತ್ತು ಶಾಕ್!

ಪತ್ತನಂತಿಟ್ಟ ಜಿಲ್ಲೆಯ ತಿರುವಲ್ಲಾ ತಾಲೂಕು ಆಸ್ಪತ್ರೆಯ ಆವರಣದಲ್ಲಿ ನಡೆದ ಹೆಲ್ಮೆಟ್ ಕಳವು ಪ್ರಕರಣವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಬೈಕ್ ಸವಾರನೊಬ್ಬ ತನ್ನ ವಾಹನದ ಬಳಿ ಇಟ್ಟಿದ್ದ ಹೆಲ್ಮೆಟ್ ಅನ್ನು ಮಹಿಳೆಯೊಬ್ಬಳು ಯಾರಿಗೂ ತಿಳಿಯದಂತೆ ಕದ್ದೊಯ್ದಿದ್ದಳು. ಆದರೆ ಆಕೆಯ ಈ ಕೃತ್ಯ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿತ್ತು.

ಆಸ್ಪತ್ರೆಯ ಮುಖ್ಯ ಕಟ್ಟಡದ ಬಳಿ ಕಾರ್ಯಕ್ರಮವೊಂದರಲ್ಲಿ ಸಚಿವರು ಭಾಗವಹಿಸಿದ್ದರಿಂದ, ವಾಹನಗಳ ನಿಲುಗಡೆ ಸ್ಥಳವನ್ನು ಹಳೆಯ ಒಪಿಡಿ ವಿಭಾಗದ ಬಳಿಗೆ ಬದಲಾಯಿಸಲಾಗಿತ್ತು. ಅಲ್ಲಿಯೇ ಪಾರ್ಕ್ ಮಾಡಲಾಗಿದ್ದ ಸ್ಕೂಟರ್‌ನಲ್ಲಿದ್ದ ಬೆಲೆಬಾಳುವ ಹೆಲ್ಮೆಟ್ ಅನ್ನು ನಿರನಮ್ ಮುಂಡನಾರಿ ಮೂಲದ ಮಧ್ಯವಯಸ್ಕ ಮಹಿಳೆಯೊಬ್ಬಳು ಕದ್ದು ಜಾರಿಕೊಂಡಿದ್ದಳು. ಕಳವಿನ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಹಿಳೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ವೀಡಿಯೋ ಜಾಲತಾಣಗಳಲ್ಲಿ ಹರಿದಾಡಲು ಪ್ರಾರಂಭಿಸುತ್ತಿದ್ದಂತೆ ತನಗೆ ತೊಂದರೆಯಾಗಬಹುದು ಎಂಬ ಭಯದಿಂದ ಮಹಿಳೆ ಸೋಮವಾರ ಬೆಳಿಗ್ಗೆ ನೇರವಾಗಿ ಆಸ್ಪತ್ರೆಗೆ ಆಗಮಿಸಿದ್ದಾಳೆ. ತಾನು ಕದ್ದಿದ್ದ ಹೆಲ್ಮೆಟ್ ಅನ್ನು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಅವರಿಗೆ ಹಿಂತಿರುಗಿಸಿ ಕ್ಷಮೆ ಯಾಚಿಸಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಸದ್ಯಕ್ಕೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular