ಚಿಕ್ಕಬಳ್ಳಾಪುರದಲ್ಲಿ ಘೋರ ಘಟನೆ ನಡೆದಿದ್ದು, ವಿದ್ಯುತ್ ಶಾಕ್ ನಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ.
ಮೃತ ಬಾಲಕನನ್ನು ಮಾದೇಶ್ (16) ಎಂದು ಗುರುತಿಸಲಾಗಿದೆ. ಡ್ರೈನೇಜ್ ಪೈಪ್ ಕ್ಲೀನ್ ಮಾಡುವಾಗ ಈ ಘಟನೆ ನಡೆದಿದೆ. ಪೈಪ್ ನಲ್ಲಿ ಸಿಲುಕಿದ್ದ ಕಂಬಿ ಎಳೆಯುವಾಗ ಕಂಬಿ ವಿದ್ಯುತ್ ತಂತಿಗೆ ತಗುಲಿದೆ. ಪರಿಣಾಮ ವಿದ್ಯುತ್ ಸ್ಪರ್ಶಿಸಿ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇತ್ತೀಚೆಗಷ್ಟೇ ಬಾಲಕ ಎಸ್ ಎಸ್ ಎಲ್ ಸಿ ಮರು ಪರೀಕ್ಷೆ ಬರೆದಿದ್ದನು. ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

