HomeLatest NewsSHOCKING : ಬೆಂಗಳೂರಲ್ಲಿ ಘೋರ ಘಟನೆ : ಗಾಳಿಪಟದ ದಾರ ಸಿಲುಕಿ ವ್ಯಕ್ತಿಯ ಕಾಲಿನ ನರ...

SHOCKING : ಬೆಂಗಳೂರಲ್ಲಿ ಘೋರ ಘಟನೆ : ಗಾಳಿಪಟದ ದಾರ ಸಿಲುಕಿ ವ್ಯಕ್ತಿಯ ಕಾಲಿನ ನರ ಕಟ್.!

ಬೆಂಗಳೂರು : ಗಾಳಿಪಟದ ದಾರಗಳು, ವಿಶೇಷವಾಗಿ ‘ಚೈನೀಸ್ ಮಾಂಜಾ’ (ನೈಲಾನ್ ದಾರ), ವಾಹನ ಸವಾರರ ಪ್ರಾಣಕ್ಕೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿವೆ. ಇತ್ತೀಚೆಗೆ ಬೆಂಗಳೂರು ಮತ್ತು ಬೀದರ್ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ನಡೆದ ಘಟನೆಗಳು ಈ ಅಪಾಯದ ತೀವ್ರತೆಯನ್ನು ಎತ್ತಿ ತೋರಿಸಿವೆ.

ಗಾಳಿಪಟದ ದಾರ ಸಿಲುಕಿ ವ್ಯಕ್ತಿಯೋರ್ವನ ಕಾಲಿನ ನರ ಕಟ್ ಆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜ.31 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಆರ್ ಟಿ ನಗರದಲ್ಲಿ ಈ ಘಟನೆ ನಡೆದಿದೆ. ಮೊದಲಿಗೆ ಬೈಕ್ ಸವಾರನಿಗೆ ಗಾಳಿಪಟದ ದಾರ ಕಾಣಿಸಿಕೊಂಡಿದೆ. ಆತ ಅದನ್ನು ಬಿಡಿಸಿಕೊಂಡು ಮುಂದಕ್ಕೆ ಹೋಗಿದ್ದಾನೆ. ಆದರೆ ಈ ವೇಳೆ ಬೈಕ್ ನ ಹಿಂದ ನಡೆದುಕೊಂಡು ಬರುತ್ತಿದ್ದ ನಾಗಾರ್ಜುನನಿಗೆ ಗಾಳಿಪಟದ ದಾರ ಸಿಲುಕಿಕೊಂಡಿದೆ. ಬೈಕ್ ಸವಾರ ಮುಂದಕ್ಕೆ ಚಲಿಸುತ್ತಿದ್ದಂತೆ ಆ ದಾರ ನಾಗಾರ್ಜುನ ನ ಕಾಲಿಗೆ ಸುತ್ತಿಕೊಂಡಿದೆ. ಪರಿಣಾಮ ಕಾಲಿಗೆ ಗಂಭೀರವಾದ ಗಾಯಗಳಾಗಿದ್ದು, ಕಾಲಿನ ನರಗಳೇ ಕಟ್ ಆಗಿದೆ. ಸದ್ಯ ನಾಗಾರ್ಜುನ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಗಾಜಿನ ಪುಡಿ ಸವರಿದ ಈ ದಾರವು ಅತ್ಯಂತ ಹರಿತವಾಗಿದ್ದು, ಎಳೆದ ತಕ್ಷಣ ಚರ್ಮ ಮತ್ತು ನರಗಳನ್ನು ಹಾನಿ ಮಾಡುತ್ತದೆ.

ಮುಂಜಾಗ್ರತಾ ಕ್ರಮಗಳು
ಬೈಕ್ ಸವಾರರು ಎಚ್ಚರ: ಫ್ಲೈಓವರ್ಗಳ ಮೇಲೆ ಹೋಗುವಾಗ ಕುತ್ತಿಗೆಗೆ ಸ್ಕಾರ್ಫ್ (Scarf) ಅಥವಾ ರಕ್ಷಾ ಕವಚ ಧರಿಸುವುದು ಸೂಕ್ತ. ಕೇವಲ ಹತ್ತಿ ದಾರಗಳನ್ನು (Cotton thread) ಬಳಸಿ.ದಾರ ಸಿಕ್ಕರೆ ಸುಟ್ಟು ಹಾಕಿ: ರಸ್ತೆಯಲ್ಲಿ ಬಿದ್ದಿರುವ ದಾರವನ್ನು ಕಂಡರೆ ಅದನ್ನು ಸುರುಳಿ ಸುತ್ತಿ ಸುರಕ್ಷಿತವಾಗಿ ವಿಲೇವಾರಿ ಮಾಡಿ ಅಥವಾ ಸುಟ್ಟು ಹಾಕಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಾರವು ಪ್ರಾಣಕ್ಕೆ ಹೇಗೆ ಸಂಚಕಾರ ತರುತ್ತದೆ?
• ಕಾಣದ ಕಿಲ್ಲರ್: ಬೈಕ್ ಸವಾರರು ವೇಗವಾಗಿ ಚಲಿಸುವಾಗ ಗಾಳಿಯಲ್ಲಿ ತೇಲಾಡುವ ಈ ದಾರಗಳು ಕಣ್ಣಿಗೆ ಸುಲಭವಾಗಿ ಕಾಣಿಸುವುದಿಲ್ಲ.
• ತೀವ್ರ ಗಾಯ: ನೈಲಾನ್ ಅಥವಾ ಗಾಜಿನ ಪುಡಿ ಸವರಿದ ದಾರಗಳು ಸವಾರನ ಕುತ್ತಿಗೆ ಅಥವಾ ಮುಖಕ್ಕೆ ತಗುಲಿದಾಗ, ವೇಗದಿಂದಾಗಿ ಅವು ಚಾಕುವಿನಂತೆ ಚರ್ಮ ಮತ್ತು ರಕ್ತನಾಳಗಳನ್ನು (Nerves) ಕತ್ತರಿಸುತ್ತವೆ.
• ರಕ್ತಸ್ರಾವ: ಕುತ್ತಿಗೆಯ ಮುಖ್ಯ ನರಗಳು ಕಟ್ ಆದಾಗ ಅತಿಯಾದ ರಕ್ತಸ್ರಾವವಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ.
• ನಿಯಂತ್ರಣ ತಪ್ಪುವುದು: ದಾರವು ಮೈಗೆ ಅಥವಾ ಚಕ್ರಕ್ಕೆ ಸಿಲುಕಿದಾಗ ಗಾಬರಿಗೊಂಡು ಸವಾರರು ಬೈಕ್ನಿಂದ ಬಿದ್ದು ಅಪಘಾತಕ್ಕೀಡಾಗುತ್ತಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular