HomeBeautyಚಳಿಗಾಲದಲ್ಲಿ ಕಾಡುವ ಡ್ರೈ ಸ್ಕಿನ್‌ ಗೆ ʼಗ್ಲಿಸರಿನ್ʼ ಬಳಸಿ ಮನೆಯಲ್ಲಿಯೇ ತಯಾರಿಸಿ ಸೌಂದರ್ಯ ಉತ್ಪನ್ನ

ಚಳಿಗಾಲದಲ್ಲಿ ಕಾಡುವ ಡ್ರೈ ಸ್ಕಿನ್‌ ಗೆ ʼಗ್ಲಿಸರಿನ್ʼ ಬಳಸಿ ಮನೆಯಲ್ಲಿಯೇ ತಯಾರಿಸಿ ಸೌಂದರ್ಯ ಉತ್ಪನ್ನ

ನಿರ್ಜಲೀಕರಣ ಮತ್ತು ಶುಷ್ಕ ಚರ್ಮಕ್ಕೆ ಚಿಕಿತ್ಸೆ ನೀಡಲು ಗ್ಲಿಸರಿನ್ ಅತ್ಯಂತ ಪರಿಣಾಮಕಾರಿ ವಸ್ತುವಾಗಿದೆ.

ಇದನ್ನು ಸೌಂದರ್ಯ ವರ್ಧಕಗಳಲ್ಲಿ ಬಳಸುತ್ತಾರೆ. ಈ ಗ್ಲಿಸರಿನ್ ಬಳಸಿ ಮನೆಯಲ್ಲಿಯೇ ಸೌಂದರ್ಯ ಉತ್ಪನ್ನಗಳನ್ನು ಹೇಗೆ ತಯಾರಿಸಬಹುದು ಎಂಬುದನ್ನು ತಿಳಿಯೋಣ.

ಚಳಿಗಾಲದಲ್ಲಿ ನಿಮ್ಮ ಕೈಕಾಲುಗಳು ತುಂಬಾ ಡ್ರೈ ಆಗುತ್ತವೆ. ಈ ಸಮಸ್ಯೆಯನ್ನು ನಿವಾರಿಸಲು 2 ಚಮಚ ಜೇನುತುಪ್ಪ, 2 ಚಮಚ ಗ್ಲಿಸರಿನ್, 2 ಚಮಚ ಓಟ್ ಮೀಲ್ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ ಇದನ್ನು ನಿಮ್ಮ ಕೈಕಾಲುಗಳಿಗೆ ಹಚ್ಚಿ ಒಣಗಲು ಬಿಡಿ. ನಂತರ ಹಾಲಿನಿಂದ ಸ್ಕ್ರಬ್ ಮಾಡಿ ನೀರಿನಿಂದ ವಾಶ್ ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಖದ ಸ್ಕಿನ್ ಡ್ರೈಯಾಗಿದ್ದರೆ 2 ಚಮಚ ಸಕ್ಕರೆ, 2 ಚಮಚ ಗ್ಲಿಸರಿನ್, 2 ಹನಿ ಲ್ಯಾವೆಂಡರ್ ಆಯಿಲ್, 1 ಚಮಚ ಉಪ್ಪು, ½ ನಿಂಬೆ ರಸ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಚರ್ಮದ ಮೇಲೆ ಸ್ಕ್ರಬ್ ಮಾಡಿ ಸಕ್ಕರೆ. ಉಪ್ಪು ಕರಗುವವರೆಗೂ ಸ್ಕ್ರಬ್ ಮಾಡುತ್ತೀರಿ. ನಂತರ ನೀರಿನಿಂದ ವಾಶ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular