HomeLatest Newsಮನೆಯಲ್ಲೇ ಮಾಡಿ ರುಚಿಕರ ಪಂಜೀರಿ ಲಾಡು: ಆರೋಗ್ಯಕ್ಕೂ ಸೈ, ಹಬ್ಬಕ್ಕೂ ಜೈ!

ಮನೆಯಲ್ಲೇ ಮಾಡಿ ರುಚಿಕರ ಪಂಜೀರಿ ಲಾಡು: ಆರೋಗ್ಯಕ್ಕೂ ಸೈ, ಹಬ್ಬಕ್ಕೂ ಜೈ!

ಹಬ್ಬಗಳು ಹಾಗೂ ವಿಶೇಷ ಸಮಾರಂಭಗಳ ಸಂದರ್ಭದಲ್ಲಿ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಅತ್ಯಂತ ಪೌಷ್ಟಿಕ ಹಾಗೂ ರುಚಿಕರ ಸಿಹಿ ತಿನಿಸು ಎಂದರೆ ಪಂಜೀರಿ ಲಾಡು. ಗೋಧಿ ಹಿಟ್ಟು, ರವೆ, ಒಣ ಕೊಬ್ಬರಿ ಹಾಗೂ ಒಣ ಹಣ್ಣುಗಳ ಪೋಷಕಾಂಶಗಳನ್ನು ಒಳಗೊಂಡಿರುವ ಈ ಲಾಡು ಆರೋಗ್ಯಕ್ಕೂ ಅತ್ಯುತ್ತಮ.

ಬೇಕಾಗುವ ಪದಾರ್ಥಗಳು: ಗೋಧಿ ಹಿಟ್ಟು – 500 ಗ್ರಾಂ, ರವೆ – 60 ಗ್ರಾಂ, ಮಖಾನಾ – 10 ಗ್ರಾಂ, ತುರಿದ ಒಣ ಕೊಬ್ಬರಿ – 1 ಬೌಲ್, ಚಾರ್ ಮಗಜ್ (ಖರಬೂಜ ಬೀಜ) – 10 ಗ್ರಾಂ, ಗೋಡಂಬಿ – 20 ರಿಂದ 25 ಗ್ರಾಂ, ಬಾದಾಮಿ – 20 ರಿಂದ 25 ಗ್ರಾಂ, ಸಕ್ಕರೆ – 150 ಗ್ರಾಂ ಹಾಗೂ ತುಪ್ಪ – 450 ಗ್ರಾಂ.

ತಯಾರಿಸುವ ವಿಧಾನ: ಮೊದಲು ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಬಿಸಿ ಮಾಡಿ ಮಖಾನಾಗಳನ್ನು ಹೊಂಬಣ್ಣ ಬರುವವರೆಗೆ ಹುರಿದುಕೊಳ್ಳಿ. ನಂತರ ಅದನ್ನು ಪ್ರತ್ಯೇಕ ತಟ್ಟೆಗೆ ತೆಗೆದು ಸಣ್ಣದಾಗಿ ಪುಡಿ ಮಾಡಿ ಇಟ್ಟುಕೊಳ್ಳಿ. ಅದೇ ಬಾಣಲೆಗೆ ತುಪ್ಪ ಹಾಕಿ ರವೆಯನ್ನು ಹಸಿ ವಾಸನೆ ಹೋಗುವವರೆಗೆ ಚೆನ್ನಾಗಿ ಹುರಿಯಿರಿ, ಬಳಿಕ ಅದಕ್ಕೆ ಗೋಧಿ ಹಿಟ್ಟು ಸೇರಿಸಿ ಸಣ್ಣ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿಯಿರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಮಿಶ್ರಣಕ್ಕೆ ಪುಡಿ ಮಾಡಿದ ಮಖಾನಾ, ತುರಿದ ಒಣ ಕೊಬ್ಬರಿ, ಚಾರ್ ಮಗಜ್, ಸಣ್ಣದಾಗಿ ಹೆಚ್ಚಿದ ಗೋಡಂಬಿ ಮತ್ತು ಬಾದಾಮಿ ತುಂಡುಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಸಕ್ಕರೆ ಪುಡಿ ಅಥವಾ ಸಕ್ಕರೆಯನ್ನು ಸೇರಿಸಿ ಮಿಶ್ರಣವನ್ನು ಒಲೆಯಿಂದ ಕೆಳಗಿಳಿಸಿ. ಮಿಶ್ರಣವು ಉಗುರುಬೆಚ್ಚಗಿರುವಾಗಲೇ ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ನಿಮಗಿಷ್ಟವಾದ ಗಾತ್ರದಲ್ಲಿ ಉಂಡೆಗಳನ್ನು (ಲಾಡು) ಕಟ್ಟಿ. ಇದನ್ನು ಗಾಳಿಯಾಡದ ಪಾತ್ರೆಯಲ್ಲಿ ಶೇಖರಿಸಿಟ್ಟರೆ ಹಲವು ದಿನಗಳ ಕಾಲ ಕೆಡದಂತೆ ಬಳಸಬಹುದು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular