HomeLatest Newsಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 'IPL' ಪಂದ್ಯ ನಡೆಸುವುದು ಒಳ್ಳೆಯ ನಿರ್ಧಾರ ಅಲ್ಲ : ನಟ ಚೇತನ್...

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ‘IPL’ ಪಂದ್ಯ ನಡೆಸುವುದು ಒಳ್ಳೆಯ ನಿರ್ಧಾರ ಅಲ್ಲ : ನಟ ಚೇತನ್ ಅಹಿಂಸಾ

ಬೆಂಗಳೂರು: “ಯಾವಾಗಲೂ ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಬಗ್ಗೆ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಲ್ಲಿರುವ ನಟ ಚೇತನ್ ಅಹಿಂಸಾ, ಈ ಬಾರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ನಡೆಸುವ ವಿಚಾರಕ್ಕೆ ಬಗ್ಗೆ ಕಿಡಿಕಾರಿದ್ದಾರೆ.

ಐಪಿಎಲ್ (IPL) ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಸುವುದು ಸರಿಯಾದ ನಿರ್ಧಾರವಲ್ಲ ಎಂದು ಚೇತನ್ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ಹೃದಯಭಾಗದಲ್ಲಿರುವ ಈ ಮೈದಾನದಲ್ಲಿ ಪಂದ್ಯಗಳು ನಡೆದಾಗ ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ಉಲ್ಲೇಖಿಸಿರುವ ಅವರು, ಐಪಿಎಲ್‌ನಂತಹ ವಾಣಿಜ್ಯ ಉದ್ದೇಶದ ಪಂದ್ಯಗಳಿಗೆ ನಗರದ ಮಧ್ಯಭಾಗದ ಮೈದಾನವನ್ನು ಬಳಸುವುದು ಸೂಕ್ತವಲ್ಲ ಎಂದಿದ್ದಾರೆ. ಕ್ರಿಕೆಟ್ ಅಭಿಮಾನಿಗಳ ಸಡಗರದ ನಡುವೆಯೇ ಚೇತನ್ ನೀಡಿರುವ ಈ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೂ ಕಾರಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚೇತನ್ ಅಹಿಂಸಾ ಹೇಳಿದ್ದೇನು..?

ಐಪಿಎಲ್ ಪಂದ್ಯಗಳನ್ನು Chinnaswamy Stadium ನಲ್ಲಿ ನಡೆಸುವುದು ಒಳ್ಳೆಯ ನಿರ್ಧಾರ ಅಲ್ಲ ಜನಸಂದಣಿ ತುಂಬಿರುವ (ಅನೇಕ ಬಾರಿ ಮಳೆಯ ನಡುವೆ) ಡೌನ್‌ಟೌನ್ Bengaluru ನಲ್ಲಿ ರಾತ್ರಿ ಪಂದ್ಯಗಳು ನಡೆಯುವುದರಿಂದ ದೊಡ್ಡ ಅಪಾಯ ಉಂಟಾಗಬಹುದು.

11 ಜನರು ಮೃತಪಟ್ಟ ಸ್ಟಾಂಪೀಡ್ ನಂತರ, ಮೊದಲು ಜವಾಬ್ದಾರಿ ನಿಶ್ಚಿತವಾಗಬೇಕು. ಬಗೆಹರಿಯದ ಪ್ರಶ್ನೆಗಳು ಇರುವಾಗ D. K. Shivakumar ಸುರಕ್ಷತೆ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳ ಸೂಕ್ತ ವ್ಯಕ್ತಿ ಅಲ್ಲ  ಎಂದು ನಟ ಚೇತನ್ ಅಹಿಂಸಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

https://twitter.com/ChetanAhimsa/status/2022221856930246910/photo/1

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular