HomeLatest Newsಭಾರತ ಹಾಕಿ ಅಭಿಮಾನಿಗಳಿಗೆ ಸಿಹಿಸುದ್ದಿ: ಮೊಹಾಲಿ ಮತ್ತು ಜಲಂಧರ್ ಪಂದ್ಯಗಳಿಗೆ ಆನ್‌ಲೈನ್ ಉಚಿತ ಪಾಸ್ ಲಭ್ಯ

ಭಾರತ ಹಾಕಿ ಅಭಿಮಾನಿಗಳಿಗೆ ಸಿಹಿಸುದ್ದಿ: ಮೊಹಾಲಿ ಮತ್ತು ಜಲಂಧರ್ ಪಂದ್ಯಗಳಿಗೆ ಆನ್‌ಲೈನ್ ಉಚಿತ ಪಾಸ್ ಲಭ್ಯ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2026 ಪುರುಷರ ಹಾಕಿ ಟೂರ್ನಿಗೆ ಸಂಬಂಧಿಸಿದಂತೆ ಹಾಕಿ ಇಂಡಿಯಾ ಕ್ರೀಡಾಭಿಮಾನಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಅಕ್ಟೋಬರ್ 27ರಿಂದ ನವೆಂಬರ್ 5ರವರೆಗೆ ಜಲಂಧರ್ ಮತ್ತು ಮೊಹಾಲಿಯಲ್ಲಿ ನಡೆಯಲಿರುವ ಒಟ್ಟು 20 ಪಂದ್ಯಗಳಿಗೆ ಪ್ರೇಕ್ಷಕರಿಗೆ ಉಚಿತ ಪ್ರವೇಶ ನೀಡುವುದಾಗಿ ಹಾಕಿ ಇಂಡಿಯಾ ಮಂಗಳವಾರ ಅಧಿಕೃತವಾಗಿ ಪ್ರಕಟಿಸಿದೆ.

ಜಲಂಧರ್‌ನ ಒಲಿಂಪಿನ್ ಸುರ್ಜಿತ್ ಸಿಂಗ್ ಹಾಕಿ ಕ್ರೀಡಾಂಗಣ ಹಾಗೂ ಮೊಹಾಲಿಯ ಒಲಿಂಪಿನ್ ಬಲ್ಬೀರ್ ಸಿಂಗ್ ಸೀನಿಯರ್ ಅಂತರರಾಷ್ಟ್ರೀಯ ಹಾಕಿ ಕ್ರೀಡಾಂಗಣಗಳು ಈ ಪಂದ್ಯಾವಳಿಗೆ ಜಂಟಿಯಾಗಿ ಆತಿಥ್ಯ ವಹಿಸಲಿವೆ. ಅಕ್ಟೋಬರ್ 27ರಿಂದ ನವೆಂಬರ್ 2ರವರೆಗಿನ ಲೀಗ್ ಹಂತದ ಪಂದ್ಯಗಳು ಜಲಂಧರ್‌ನಲ್ಲಿ ನಡೆಯಲಿದ್ದು, ನವೆಂಬರ್ 4 ಮತ್ತು 5ರಂದು ನಡೆಯಲಿರುವ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಮೊಹಾಲಿಯಲ್ಲಿ ಆಯೋಜನೆಯಾಗಲಿವೆ. ಅಭಿಮಾನಿಗಳು www.ticketgenie.in ವೆಬ್‌ಸೈಟ್‌ ಮೂಲಕ ಉಚಿತ ಪಾಸ್‌ಗಳನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ.

ಕ್ರೀಡಾಭಿಮಾನಿಗಳನ್ನು ಹಾಕಿ ಕ್ರೀಡೆಯತ್ತ ಮತ್ತಷ್ಟು ಹತ್ತಿರ ತರುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಹಾಗೂ ಪ್ರಧಾನ ಕಾರ್ಯದರ್ಶಿ ಭೋಲಾ ನಾಥ್ ಸಿಂಗ್ ತಿಳಿಸಿದ್ದಾರೆ. ಭಾರತ ತಂಡವು ತನ್ನ ಮೊದಲ ಲೀಗ್ ಪಂದ್ಯವನ್ನು ಅಕ್ಟೋಬರ್ 27ರಂದು ಬಾಂಗ್ಲಾದೇಶದ ವಿರುದ್ಧ ಆಡಲಿದ್ದು, ತದನಂತರ ಚೀನಾ, ಜಪಾನ್, ಮಲೇಷ್ಯಾ ಮತ್ತು ದಕ್ಷಿಣ ಕೊರಿಯಾ ತಂಡಗಳನ್ನು ಎದುರಿಸಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular