HomeKarnatakaಹಿಟ್ & ರನ್ ಪ್ರಕರಣ: ಕಾಂಗ್ರೆಸ್ ಮುಖಂಡನ ಪುತ್ರ ಅರೆಸ್ಟ್; ಜಾಮೀನು ಮೇಲೆ ಬಿಡುಗಡೆ

ಹಿಟ್ & ರನ್ ಪ್ರಕರಣ: ಕಾಂಗ್ರೆಸ್ ಮುಖಂಡನ ಪುತ್ರ ಅರೆಸ್ಟ್; ಜಾಮೀನು ಮೇಲೆ ಬಿಡುಗಡೆ

ಉಡುಪಿ: ಹಿಟ್ & ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಬೆಳಪು ದೇವಿಪ್ರಸಾದ್ ಶೆಟ್ಟಿ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಜ್ವಲ್ ಶೆಟ್ಟಿ ಬಂಧಿತ ಆರೋಪಿ. ನ.11ರಂದು ಉಡುಪಿಯಲ್ಲಿ ನಡೆದಿದ್ದ ಹಿಟ್ & ರನ್ ಕೇಸ್ ನಲ್ಲಿ ಮೊಹಮ್ಮದ್ ಹುಸೇನ್ ಎಂಬುವವರು ಸಾವನ್ನಪ್ಪಿದ್ದರು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ಶೆಟ್ಟಿಯನ್ನು ಬಂಧಿಸಲಾಗಿದೆ.

ಪ್ರಜ್ವಲ್ ಶೆಟ್ಟಿ ತನ್ನ ಥಾರ್ ಜೀಪ್ ನಿಇಂದ ಮೊಹಮ್ಮದ್ ಹುಸೇನ್ ಅವರ ಬೈಕ್ ಗೆ ಗುದ್ದಿ ಪರಾರಿಯಾಗಿದ್ದರು. ಅಪ್ಪಘಾತದ ದ್ಋಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಶಿರ್ವ ಪೊಲೀಸರು ಪ್ರಜ್ವಲ್ ಶೆಟ್ಟಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ನಿದ್ದೆ ಮಂಪರಿನಲ್ಲಿ ಅಪಘಾತ ನಡೆದಿದೆ ಎಂದು ಆರೋಪಿ ಹೇಳಿದ್ದಾನೆ. ಠಾಣೆ ಬೇಲ್ ಮೇಲೆ ಪ್ರಜ್ವಲ್ ನನ್ನು ಬಿಡುಗಡೆ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular