HomeKarnatakaBREAKING NEWS: ಹಿಟ್ & ರನ್ ಗೆ ಅರ್ಚಕ ಬಲಿ

BREAKING NEWS: ಹಿಟ್ & ರನ್ ಗೆ ಅರ್ಚಕ ಬಲಿ

ಗದಗ: ಹಿಟ್ ಆಂಡ್ ರನ್ ಗೆ ಮೃದ್ಧ ಅರ್ಚಕರೊಬ್ಬರು ಬಲಿಯಾಗಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಢ ತಾಲೂಕಿನ ನರೇಗಲ್ ಪಟ್ಟಣದಲ್ಲಿ ನಡೆದಿದೆ.

ನರೇಗಲ್ ನಿವಾಸಿ ಮಲ್ಲಯ್ಯ ಬಕ್ಕಯ್ಯನವರ (65) ಮೃತ ಅರ್ಚಕರು. ಬೆಳಿಗ್ಗೆ ಚಹಾ ಕುಡಿಯಲೆಂದು ಮನೆಯಿಂದ ಹೊರ ಹೋಗಿದ್ದ ಮಲ್ಲಯ್ಯ ಅವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಹೋಗಿದೆ. ಪಟ್ಟಣ ಪಂಚಾಯಿತಿ ಬಳಿ ಮಲ್ಲಯ್ಯ ಮೇಲೆಯೇ ವಾಹನ ಹರಿದು ಹೋಗಿದೆ. ಸ್ಥಳದಲ್ಲೇ ಮಲ್ಲಯ್ಯ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ನರೇಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
RELATED ARTICLES

Most Popular