HomeKarnatakaBIG NEWS: ಭಯಂಕರ ದೃಶ್ಯ; ಬೈಕ್ ಸವಾರನ ಮೃಗೀಯ ವರ್ತನೆ; ವ್ಯಕ್ತಿಯನ್ನು 1 ಕಿ.ಮೀ ರಸ್ತೆಯಲ್ಲಿಯೇ...

BIG NEWS: ಭಯಂಕರ ದೃಶ್ಯ; ಬೈಕ್ ಸವಾರನ ಮೃಗೀಯ ವರ್ತನೆ; ವ್ಯಕ್ತಿಯನ್ನು 1 ಕಿ.ಮೀ ರಸ್ತೆಯಲ್ಲಿಯೇ ಎಳೆದೊಯ್ದ ಕಿರಾತಕ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೈಕ್ ಸವಾರನೊಬ್ಬ ಮೃಗೀಯ ವರ್ತನೆ ತೋರಿದ್ದು, ಬೈಕ್ ಹಿಂಬದಿಗೆ ಜೋತು ಬಿದ್ದಿದ್ದ ವ್ಯಕ್ತಿಯೋರ್ವರನ್ನು 1 ಕಿ.ಮೀ ರಸ್ತೆಯಲ್ಲಿ ಎಳೆದುಕೊಂಡು ಹೋಗಿರುವ ಅಮಾನವೀಯ ಘಟನೆ ನಡೆದಿದೆ.

ಬೆಂಗಳೂರಿನ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ಬೈಕ್ ಸವಾರ ಟಾಟಾ ಸುಮೊ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಿಂದಾಗಿ ಬೈಕ್ ಸವಾರ ಹಾಗೂ ಟಾಟಾ ಸುಮೋ ಚಾಲಕನ ನಡುವೆ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆಯುತ್ತಿದ್ದಂತೆ ಬೈಕ್ ಸವಾರ ಬೈಕ್ ನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಟಾಟಾ ಸುಮೊ ಚಾಲಕ ಬೈಕ್ ನ ಹಿಂಬದಿಯನ್ನು ಹಿಡಿದು ನಿಲ್ಲಿಸಲು ಯತ್ನಿಸಿದ್ದಾರೆ. ಆದರೂ ಬೈಕ್ ಸವಾರ ಬೈಕ್ ನಿಲ್ಲಿಸದೇ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟಾಟಾ ಸುಮೋ ಚಾಲಕ ಬೈಕ್ ನ ಹಿಂಬದಿಯಲ್ಲಿ ಜೋತುಬಿದ್ದು ಬೈಕ್ ಸವಾರನನ್ನು ತಡೆಯಲು ಯತ್ನಿಸಿದ್ದಾರೆ. ಚಾಲಕ ತನ್ನ ಬೈಕ್ ಹಿಂದೆ ಜೋತು ಬಿದ್ದರೂ ಕ್ಯಾರೇ ಎನ್ನದ ಬೈಕ್ ಸವಾರ ಇನ್ನೂ ವೇಗವಾಗಿ ಬೈಕ್ ಓಡಿಸಿಕೊಂಡು ಹೋಗಿದ್ದಾನೆ. ಸುಮಾರು 1 ಕಿ.ಮೀ ವರೆಗೂ ಬೈಕ್ ಸವಾರ ಚಾಲಕನನ್ನು ರಸ್ತೆಯಲ್ಲಿಯೇ ಎಳೆದುಕೊಂಡು ಹೋಗಿದ್ದಾನೆ. ಸಾರ್ವಜನಿಕರು ಹಾಗೂ ಪೊಲೀಸರು ಮತ್ತೊಂದು ಸಿಗ್ನಲ್ ಬಳಿ ಬೈಕ್ ಸವಾರನನ್ನು ತಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಟಾಟಾ ಸುಮೋ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಬೈಕ್ ಸವಾರನನ್ನು ವಶಕ್ಕೆ ಪಡೆದಿದ್ದಾರೆ. ಮನಕಲಕುವ ದೃಶ್ಯ ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular