HomeKarnatakaBIG NEWS: ಹಿಂದೂ ಧರ್ಮ, ಲಿಂಗಾಯಿತ ಧರ್ಮ ಒಂದೇ: ವಚನಾನಂದ ಶ್ರೀ

BIG NEWS: ಹಿಂದೂ ಧರ್ಮ, ಲಿಂಗಾಯಿತ ಧರ್ಮ ಒಂದೇ: ವಚನಾನಂದ ಶ್ರೀ

ವಿಜಯಪುರ: ಹಿಂದೂ ಧರ್ಮ, ಲಿಂಗಾಯಿತ ಧರ್ಮ ಒಂದೇ. ನಾವೆಲ್ಲರೂ ಹಿಂದೂಗಳೇ, ಹಿಂದೂ ಎಂಬುದು ಮಹಾಸಾಗರವಾಗಿದೆ. ಬೌದ್ಧ, ಜೈನ, ಸಿಖ್, ಲಿಂಗಾಯಿತ, ವೈಷ್ಣವ ಎಂಬ ನದಿಗಳಿವೆ ಎಂದು ಹರಿಹರದ ಪಂಚಮಸಾಲಿ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.

ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ಅನೇಕ ನದಿಗಳು ಹಿಂದೂ ಎಂಬ ಮಹಾಸಾಗರದಲ್ಲಿ ವಿಲೀನವಾಗಿವೆ. ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜಾಚಾರ್ಯರು, ಗುರುನಾನಕರು, ಜ್ಞಾನೇಶ್ವರ ಬಸವಣ್ಣನವರು ಆಯಾ ಕಾಲಘಟ್ಟದಲ್ಲಿ ಅವರವರ ವಿಚಾರಧಾರೆಗಳನ್ನು ಹೇಳಿದ್ದಾರೆ. ವಿಚಾರಧಾರೆಗಳೇ ಧರ್ಮಗಳಾದವು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ 12ನೇ ಶತಮಾನದಲ್ಲಿ ಬಸವಣ್ಣ ಜಗತ್ತಿಗೆ ಹೊಸದನ್ನು ಕೊಟ್ಟರು. ಜಗಜ್ಯೋತಿ ಬಸವೇಶ್ವರರ ವಿಚಾರಧಾರೆಯನ್ನು ಸೀಮಿತ ಮಾಡಬಾರದು. ಯಾವುದೇ ಮಹಾಪುರುಷರ ಅನುಕರಣೆ ಮಾಡುವವರನ್ನು ಟೀಕಿಸಬಾರದು. ನಾವೇ ಶ್ರೇಷ್ಠವೆಂದು ಟೀಕಿಸಬಾರದು. ಒಂದು ಧರ್ಮದ ಆಚರಣೆಗಳನ್ನು ಕೀಳಾಗಿ ಕಾಣುವುದು ಒಳಿತಲ್ಲ. ಮತ್ತೊಂದು ತತ್ವಗಳನ್ನು ತುಚ್ಛವಾಗಿ ಕಾಣಬಾರದು. ಎಲ್ಲವೂ ಒಂದೇ, ಹಿಂದೂ ಧರ್ಮ ಲಿಂಗಾಯತ ಧರ್ಮ ಎರಡು ಒಂದೇ ಎಂದು ಸ್ಪಷ್ಟನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular