ಶಿಮ್ಲಾ: ಹೊಸ ವರ್ಷ ಸಂಭ್ರಮಾಚರಣೆ ನಡುವೆಯೇ ಹಿಮಾಚಲಪ್ರದೇಶದ ನಲಗಢ ಪೊಲೀಸ್ ಸ್ಟೇಷನ್ ಬಳಿ ಭಾರಿ ಸ್ಫೋಟ ಸಂಭವಿಸಿದ್ದು, ಸುತ್ತಲಿನ ಪ್ರದೇಶದ ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿರುವ ಗಹ್ಟನೆ ನಡೆದಿದೆ.
ಹಿಮಾಚಲಪ್ರದೇಶದ ಸೋಲನ್ ಜಿಲ್ಲೆಯ ನಲಗಢದಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಸ್ಟೇಷನ್ ಬಳಿಯ ಲೇನ್ ನಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಸ್ಫೋಟದ ಭೀಕರತೆಗೆ ಸ್ಥಳದಿಂದ ನೂರಾರು ಮೀಟರ್ ದೂರದಲ್ಲಿರುವ ಸೇನಾ ಕ್ಯಾಂಟೀನ್ ಸೇರಿದಂತೆ ಹಲವು ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಟ್ಟಡದ ಗಾಜುಗಳು ಒಡೆದು ಹೋಗಿವೆ.
ಸ್ಥಳೀಯರ ಪ್ರಕಾರ 400ರಿಂದ 500 ಮೀಟರ್ ದೂರದಿಂದ ಜೋರಾದ ಶಬ್ಧ ಕೇಳಿಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ವಿಧಿವಿಜ್ಞಾನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಘಟನೆಯಲ್ಲಿ ಯಾವುದೇ ಸಾವು-ನೋವಿನ ವರದಿಯಾಗಿಲ್ಲ.

