HomeIndiaಹೆದ್ದಾರಿ ಕಾಮಗಾರಿ ವೇಳೆ ಅವಘಡ: ಟ್ರಕ್ ನಲ್ಲಿದ್ದ ಸಿಲಿಂಡರ್ ಸ್ಫೋಟ!

ಹೆದ್ದಾರಿ ಕಾಮಗಾರಿ ವೇಳೆ ಅವಘಡ: ಟ್ರಕ್ ನಲ್ಲಿದ್ದ ಸಿಲಿಂಡರ್ ಸ್ಫೋಟ!

ಚೆನ್ನೈ: ಹೆದ್ದಾರಿ ಕಾಮಗಾರಿ ವೇಳೆ ಟ್ರಕ್ ನಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡ ಘಟನೆ ತಮಿಳುನಾಡಿನ ಚಿನ್ನಪ್ಪಂಪಟ್ಟಿಯಲ್ಲಿ ನಡೆದಿದೆ.

ಚತುಷ್ಪಥ ಹೆದ್ದಾರಿ ವೈಟ್ ಲೈನ್ ಕಾಮಗಾರಿ ವೇಳೆ ಟ್ರಕ್ ನಲ್ಲಿ ಇರಿಸಲಾಗಿದ್ದ ಸಿಲಿಂಡರ್ ಸ್ಫೋಟಗೊಂಡಿದೆ. ಅದರಲ್ಲಿದ್ದ ಸಿಲಿಂಡರ್ ಗಳನ್ನು ರಸ್ತೆಯ ಮೇಲೆ ಬಿಳಿ ರೇಖೆಗಳನ್ನು ಎಳೆಯಲು ಬಳಸಲಾಗುತ್ತಿತ್ತು. ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ.

ಘಟನೆಯಿಂದಾಗಿ ಕೆಲ ಕಾಲ ವಾಹನ ಸವಾರರಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಅದೃಷ್ಟವಶಾತ್ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular