HomeKarnatakaBIG NEWS: ಅಪರಾಧಿ ಮೃತಪಟ್ಟರೂ ಆತನಿಗೆ ವಿಧಿಸಿದ ದಂಡ ವಸೂಲಿ ಮಾಡಬಹುದು; ಹೈಕೋರ್ಟ್ ಮಹತ್ವದ ಆದೇಶ

BIG NEWS: ಅಪರಾಧಿ ಮೃತಪಟ್ಟರೂ ಆತನಿಗೆ ವಿಧಿಸಿದ ದಂಡ ವಸೂಲಿ ಮಾಡಬಹುದು; ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಅಪರಾಧಿ ಮೃತಪಟ್ಟರೂ ಆತನಿಗೆ ವಿಧಿಸಿದ ದಂಡ ವಸೂಲಿ ಮಾಡಬಹುದು ಎಂದು ಹೈಕೋರ್ಟ್ ಏಕ ಸದಸ್ಯ ಪೀಠದಿಂದ ಆದೇಶ ನೀಡಲಾಗಿದೆ.

ಮೃತ ಅಪರಾಧಿಯ ಆಸ್ತಿಯಿಂದ ದಂಡ ವಸೂಲಿ ಮಾಡಲು ಸೂಚನೆ ನೀಡಲಾಗಿದೆ. ಅಪರಾಧಿಗೆ ವಿದ್ಯುತ್ ಕಾಯ್ದೆಯಡಿ 29,204 ರೂ.ದಂಡ ವಿಧಿಸಲಾಗಿತ್ತು. ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ವೇಳೆ ಅಪರಾಧಿ ಸಾವು ಕಂಡಿದ್ದಾರೆ. ಅಪರಾಧಿ ಸಾವಿನ ಬಗ್ಗೆ ಹೈಕೋರ್ಟ್ ಗೆ ವಕೀಲರು ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಚಾರಣೆ ನಡೆದು ಅಪರಾಧಿಯ ಆಸ್ತಿಯಿಂದ ದಂಡ ವಸೂಲಿ ಮಾಡಬಹುದು ಎಂದು ಹೈಕೋರ್ಟ್ ತೀರ್ಪು ನೀಡಿದೆ. ಮೃತನ ಆಸ್ತಿಯ ಉತ್ತರಾಧಿಕಾರಿಯಿಂದಲೂ ದಂಡ ವಸೂಲಿ ಮಾಡಬಹುದು ಎಂದು ಹೇಳಿದೆ. ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular