HomeBeautyʼದಾಸವಾಳʼ ಹೊಂದಿದೆ ರೋಸ್ ವಾಟರ್ ಗಿಂತಲೂ ಹೆಚ್ಚು ಸೌಂದರ್ಯ ಗುಣ

ʼದಾಸವಾಳʼ ಹೊಂದಿದೆ ರೋಸ್ ವಾಟರ್ ಗಿಂತಲೂ ಹೆಚ್ಚು ಸೌಂದರ್ಯ ಗುಣ

ಸಾಮಾನ್ಯವಾಗಿ ಫೇಸ್ ಫ್ಯಾಕ್ ಗೆ ರೋಸ್ ವಾಟರ್ ಬಳಸ್ತಾರೆ. ಇದು ಸೌಂದರ್ಯವನ್ನು ವೃದ್ಧಿಸುತ್ತದೆ. ಆದ್ರೆ ರೋಸ್ ವಾಟರ್ ಮಾತ್ರವಲ್ಲ ದಾಸವಾಳ ಕೂಡ ಸೌಂದರ್ಯ ವೃದ್ಧಿಸುವ ಕೆಲಸ ಮಾಡುತ್ತದೆ.

ದಾಸವಾಳದ ಎಲೆಗಳಲ್ಲಿ ಸುಕ್ಕನ್ನು ಕಡಿಮೆ ಮಾಡುವ ಗುಣವಿದೆ. ವಯಸ್ಸು ಕಡಿಮೆಯಾಗಿ,‌ ಯಂಗ್ ಆಗಿ ಕಾಣಬೇಕೆನ್ನುವವರು ದಾಸವಾಳದ ಎಲೆಗಳ ಫೇಸ್ ಪ್ಯಾಕ್ ಬಳಸಬೇಕು.

ಎಲೆಗಳನ್ನು ನೀರಿನಲ್ಲಿ ಕುದಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಅದಕ್ಕೆ ಜೇನುತುಪ್ಪವನ್ನು ಬೆರೆಸಿ ಪೇಸ್ಟ್ ತಯಾರಿಸಿ ಪೇಸ್ಟನ್ನು ಮುಖದ ಮೇಲೆ ನಿಧಾನವಾಗಿ ಹಚ್ಚಿ. ಹದಿನೈದು ಇಪ್ಪತ್ತು ನಿಮಿಷಗಳ ನಂತರ, ಮುಖವನ್ನು ತಣ್ಣೀರಿನಿಂದ ತೊಳೆದು ಸ್ವಚ್ಛಗೊಳಿಸಿ. ಕೆಲವೇ ದಿನಗಳಲ್ಲಿ ಮುಖದ ಮೇಲಾಗುವ ಬದಲಾವಣೆ ಗಮನಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular