HomeLatest Newsಗಲೀಜಾದ ಮಿಕ್ಸಿ ಹೊಸದರಂತೆ ಹೊಳೆಯಲು ಈ ರೀತಿ ಸ್ವಚ್ಛಗೊಳಿಸಿ

ಗಲೀಜಾದ ಮಿಕ್ಸಿ ಹೊಸದರಂತೆ ಹೊಳೆಯಲು ಈ ರೀತಿ ಸ್ವಚ್ಛಗೊಳಿಸಿ

ಅಡುಗೆ ಮನೆಯಲ್ಲಿ ಮಿಕ್ಸಿ ಬಹಳ ಮುಖ್ಯವಾದ ವಸ್ತುವಾಗಿದೆ. ಇದನ್ನು ಮಸಾಲೆ, ಬೇಳೇಕಾಳಗಳು ಹಾಗೂ ಇನ್ನಿತರ ವಸ್ತುಗಳನ್ನು ರುಬ್ಬಲು ಬಳಸುತ್ತಾರೆ. ಹಾಗಾಗಿ ಇದರ ಮೇಲೆ ಮಸಾಲೆಗಳು ಬಿದ್ದು ಬೇಗನೆ ಗಲೀಜು ಕುಳಿತುಕೊಳ್ಳುತ್ತದೆ. ಇದನ್ನು ಸ್ವಚ್ಚ ಮಾಡಿ ಹೊಸದರಂತೆ ಹೊಳೆಯುವ ಹಾಗೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ.

ಮಿಕ್ಸಿಯ ಹೊರಭಾಗವನ್ನು ಸ್ವಚ್ಛಗೊಳಿಸಲು ಡಿಟರ್ ಜೆಂಟ್ ಮತ್ತು ವಿನೆಗರ್ ಬಳಸಿ. 1 ಚಮಚ ಡಿಟರ್ ಜೆಂಟ್ ಗೆ 2 ಚಮಚ ವಿನೆಗರ್ ಬೆರೆಸಿ ಹತ್ತಿಯ ಸಹಾಯದಿಂದ ಮಿಕ್ಸಿಯ ಮೇಲೆ ಉಜ್ಜಿ. ಇದರಿಂದ ಮಿಕ್ಸಿಯ ಮೇಲೆ ಕುಳಿತ ಗಲೀಜು, ಕಲೆಗಳು ನಿವಾರಣೆಯಾಗುತ್ತದೆ. ಬಳಿಕ ಬಟ್ಟೆಯಿಂದ ಒರೆಸಿ. ಹಾಗೇ ಟೂತ್ ಪೇಸ್ಟ್ ಅನ್ನು ತೆಗೆದುಕೊಂಡು ಬ್ರಷ್ ನ ಸಹಾಯದಿಂದ ಉಜ್ಜಿದರೆ ಕೂಡ ಮಿಕ್ಸಿ ಹೊಳಪಿನಿಂದ ಕೂಡಿರುತ್ತದೆ.

ಮಿಕ್ಸಿ ಜಾರ್ ಒಳಗಡೆ ತುಂಬಾ ಗಲೀಜು ಕುಳಿತಿರುತ್ತದೆ. ಅದನ್ನು ಸುಲಭವಾಗಿ ತೆಗೆದುಹಾಕಲು ಮಿಕ್ಸಿ ಜಾರ್ ಗೆ ಉಪ್ಪು, ನೀರು ಅಡುಗೆ ಸೋಡಾ ಮತ್ತು ವಿನೆಗರ್ ಅನ್ನು ಹಾಕಿ ಸ್ವಲ್ಪ ಹೊತ್ತು ಬಿಡಿ. ಬಳಿಕ ಮಿಕ್ಸಿ ಜಾರ್ ಅನ್ನು ಗ್ರೈಂಡ್ ಮಾಡಿದರೆ ಗಲೀಜು ಹೊರ ಬರುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular