ತಹಶೀಲ್ದಾರ್ ಅವರ ನಿರ್ದೇಶನದಂತೆ ಉಪ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್, 23 ರಂದು ಬೆಳಗ್ಗೆ 11 ಗಂಟೆಗೆ ಮಡಿಕೇರಿ ಸಂಪಾಜೆ ನಾಡ ಕಚೇರಿಯಲ್ಲಿ ‘ಪಿಂಚಣಿ ಅದಾಲತ್’ ಕಾರ್ಯಕ್ರಮ ನಡೆಯಲಿದೆ.
ಈ ಅದಾಲತ್‍ನಲ್ಲಿ ಈ ಹಿಂದೆ ಪಿಂಚಣಿ ಬರುತ್ತಿದ್ದು, ಪ್ರಸ್ತುತ ಪಿಂಚಣಿ ನಿಂತು ಹೋಗಿದ್ದಲ್ಲಿ ಅಂಥವರು ಮನವಿ ಸಲ್ಲಿಸಬಹುದಾಗಿದೆ. ಒಂದು ವೇಳೆ ಪಿಂಚಣಿ ಆದೇಶ ಪಡೆದುಕೊಂಡು ತಾಂತ್ರಿಕ ಕಾರಣಗಳಿಂದಾಗಿ ಪಿಂಚಣಿ ಸ್ಥಗಿತವಾಗಿದ್ದಲ್ಲಿ ಅಂತಹವರು ಸಹ ಈ ದಿನ ಹಾಜರಾಗಿ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಸಂಪಾಜೆ ಹೋಬಳಿ ವ್ಯಾಪ್ತಿಯ ಎಲ್ಲಾ ಸಾರ್ವಜನಿಕರು ಈ ಪಿಂಚಣಿ ಅದಾಲತ್‍ನ ಸದುಪಯೋಗ ಪಡೆದುಕೊಳ್ಳುವಂತೆ ಸಂಪಾಜೆ ನಾಡಕಚೇರಿಯ ಉಪ ತಹಶೀಲ್ದಾರ್ ಅವರು ತಿಳಿಸಿದ್ದಾರೆ.

