HomeHealthಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ಗ್ಯಾಸ್ಟ್ರಿಕ್ ಸದ್ಯ ಎಲ್ಲರ ಸಾಮಾನ್ಯ ಸಮಸ್ಯೆ. ಎಣ್ಣೆಯುಕ್ತ-ಮಸಾಲೆಯುಕ್ತ ಆಹಾರ ಸೇವಿಸುವುದರಿಂದ ಅಥವಾ ಹಳೆಯ ಆಹಾರ ಸೇವಿಸುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಇದ್ರಿಂದ ಅಜೀರ್ಣ, ವಾಯು, ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವವರು ಕೆಲ ಮನೆ ಮದ್ದುಗಳಿಂದ ಬೇಗ ನೆಮ್ಮದಿ ಪಡೆಯಬಹುದು.

ಗ್ಯಾಸ್ಟ್ರಿಕ್ ಸಮಸ್ಯೆ ಹೋಗಬೇಕೆಂದ್ರೆ ಜೀರ್ಣಾಂಗ ವ್ಯವಸ್ಥೆ ಸರಿಯಾಗಬೇಕು. ಇದಕ್ಕೆ ಓಂಕಾಳು ಒಳ್ಳೆಯ ಮದ್ದು. ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ದಿನಕ್ಕೆ ಒಮ್ಮೆ ಅರ್ಧ ಟೀ ಚಮಚ ಅಜ್ವೈನವನ್ನು ನೀರಿನೊಂದಿಗೆ ಬೆರೆಸಿ ಸೇವನೆ ಮಾಡುವುದ್ರಿಂದ ಹೊಟ್ಟೆ ಸಮಸ್ಯೆ ಕಡಿಮೆಯಾಗುತ್ತದೆ.

ಜೀರಿಗೆ ನೀರು, ಗ್ಯಾಸ್ಟ್ರಿಕ್ ಸಮಸ್ಯೆಗೆ ಒಳ್ಳೆಯ ಮನೆಮದ್ದು. ಇದು ಲಾಲಾರಸ ಗ್ರಂಥಿಗಳನ್ನು ಉತ್ತೇಜಿಸುತ್ತವೆ. ಆಹಾರ ಜೀರ್ಣವಾಗಲು ನೆರವಾಗುತ್ತದೆ. ಪ್ರತಿದಿನ ಒಂದು ಚಮಚ ಜೀರಿಗೆಯನ್ನು,ಎರಡು ಕಪ್ ನೀರಿಗೆ ಹಾಕಿ 10-15 ನಿಮಿಷಗಳ ಕಾಲ ಕುದಿಸಬೇಕು. ಆಹಾರ ತಿಂದ ನಂತರ ಇದನ್ನು ಸೇವನೆ ಮಾಡಬೇಕು. ಮೂರ್ನಾಲ್ಕು ದಿನಗಳಲ್ಲಿಯೇ ನಿಮಗೆ ಪರಿಣಾಮ ಕಾಣಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಿಂಗು ಕೂಡ ಗ್ಯಾಸ್ಟ್ರಿಕ್ ಗೆ ಒಳ್ಳೆಯದು. ಉಗುರುಬೆಚ್ಚಗಿನ ನೀರಿನಲ್ಲಿ ಹಿಂಗನ್ನು ಬೆರೆಸಿ ಸೇವಿಸುವುದರಿಂದ ಗ್ಯಾಸ್ ಸಮಸ್ಯೆ ಕಡಿಮೆಯಾಗುತ್ತದೆ. ಇದು ವಾಯು-ವಿರೋಧಿ ಆಗಿ ಕೆಲಸ ಮಾಡುತ್ತದೆ. ಕರುಳಿನಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ.  ಆಯುರ್ವೇದದ ಪ್ರಕಾರ, ಹಿಂಗು, ದೇಹದ ವಾತ ದೋಷವನ್ನು ಸಮತೋಲನದಲ್ಲಿಡುತ್ತದೆ.

ಊಟದ ನಂತರ ಒಂದು ಚಮಚ ತಾಜಾ ಶುಂಠಿ ರಸವನ್ನು ಒಂದು ಚಮಚ ನಿಂಬೆ ರಸದೊಂದಿಗೆ ತೆಗೆದುಕೊಳ್ಳಿ. ಶುಂಠಿ ಟೀ, ಗ್ಯಾಸ್ ಸಮಸ್ಯೆಗೆ ಒಳ್ಳೆಯದು.

ವಾಯು ಸಮಸ್ಯೆಯನ್ನು ಕಡಿಮೆ ಮಾಡಲು, ಬೇಕಿಂಗ್ ಪೌಡರ್ ಜೊತೆಗೆ ನಿಂಬೆ ರಸವನ್ನು ಸೇವನೆ ಮಾಡಬಹುದು. ಸ್ವಲ್ಪ ನಿಂಬೆ ರಸಕ್ಕೆ, ಸ್ವಲ್ಪ ಅಡುಗೆ ಸೋಡಾ ಹಾಕಿ, ಒಂದು ಗ್ಲಾಸ್ ನೀರು ಹಾಕಿ ಮಿಕ್ಸ್ ಮಾಡಬೇಕು. ಊಟದ ನಂತರ ಇದನ್ನು ಸೇವಿಸಬೇಕು. ಇದ್ರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.

ಗ್ಯಾಸ್, ಅಜೀರ್ಣ ಮತ್ತು ವಾಯು ಸಮಸ್ಯೆಗೆ ತ್ರಿಪಲ ಚೂರ್ಣ ಬೆಸ್ಟ್. ಅರ್ಧ ಚಮಚ ತ್ರಿಫಲ ಪುಡಿಯನ್ನು ಎರಡು ಕಪ್ ನೀರಿನಲ್ಲಿ ಕುದಿಸಿ ಮತ್ತು 5 ರಿಂದ 7 ನಿಮಿಷಗಳ ಕಾಲ ಕುದಿಸಿ. ಮಲಗುವ ಮುನ್ನ ಇದನ್ನು ಕುಡಿಯಿರಿ.

For Latest News Updates, Join Our Whatsapp Community🚩
RELATED ARTICLES

Most Popular