HomeLifestyleಇಲ್ಲಿದೆ ʼಬೀಟ್ ರೂಟ್ ಹಲ್ವಾʼ ಮಾಡುವ ವಿಧಾನ

ಇಲ್ಲಿದೆ ʼಬೀಟ್ ರೂಟ್ ಹಲ್ವಾʼ ಮಾಡುವ ವಿಧಾನ

ಬೀಟ್ ರೂಟ್ ಆರೋಗ್ಯಕ್ಕೆ ಒಳ್ಳೆಯದು. ರಕ್ತ ಹೀನತೆಯಿಂದ ಬಳಲುತ್ತಿರುವವರು ಬೀಟ್ ರೂಟ್ ಜಾಸ್ತಿ ತಿನ್ನಬೇಕು. ಕೆಲವರಿಗೆ  ಬೀಟ್ ರೂಟ್  ಸಾಂಬಾರ್, ಪಲ್ಯೆ ಇಷ್ಟವಾಗುವುದಿಲ್ಲ. ಅಂತವರು ಬೀಟ್ ರೂಟ್ ಹಲ್ವಾ ಮಾಡಿ ತಿನ್ನಿ.

ಬೀಟ್ ರೂಟ್ ಹಲ್ವಾ ಮಾಡಲು ಬೇಕಾಗುವ ಪದಾರ್ಥ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದು ಬೀಟ್ ರೂಟ್

ಒಂದು ಸಣ್ಣ ಬಾಳೆಹಣ್ಣು

ಎರಡು ಚಮಚ ಸಕ್ಕರೆ

ಎರಡು ಚಮಚ ಪಿಸ್ತಾ, ಗೋಡಂಬಿ, ಬಾದಾಮಿ ಪುಡಿ

½ ಕಪ್ ಹಸಿ ಕೊಬ್ಬರಿ

½ ಚಮಚ ಏಲಕ್ಕಿ ಪುಡಿ

ಬೀಟ್ ರೂಟ್ ಹಲ್ವಾ ಮಾಡುವ ವಿಧಾನ :

ಬೀಟ್ ರೂಟ್ ಸಿಪ್ಪೆ ತೆಗೆದು ತುರಿದುಕೊಳ್ಳಿ. ನಂತ್ರ ಅದರಲ್ಲಿರುವ ನೀರಿನ ಅಂಶವನ್ನು ಹಿಂಡಿ ತೆಗೆಯಿರಿ. ರಸ ತೆಗೆದ ಬೀಟ್ ರೂಟ್ ತುರಿಗೆ ಕಿವಿಚಿದ ಬಾಳೆಹಣ್ಣು, ಸಕ್ಕರೆ, ಏಲಕ್ಕಿ ಪುಡಿ, ಹಸಿ ಕೊಬ್ಬರಿ, ಪಿಸ್ತಾ, ಗೋಡಂಬಿ, ಬಾದಾಮಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೆಲ ಹೊತ್ತು ಇದನ್ನು ಫ್ರಿಜ್ ನಲ್ಲಿಟ್ಟು ತಿಂದರೆ ಮತ್ತಷ್ಟು ರುಚಿ ಜಾಸ್ತಿಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular