HomeLifestyleಇಲ್ಲಿದೆ ಬಿಸಿ ಬಿಸಿ 'ಅಣಬೆ ಸೂಪ್' ರೆಸಿಪಿ

ಇಲ್ಲಿದೆ ಬಿಸಿ ಬಿಸಿ ‘ಅಣಬೆ ಸೂಪ್’ ರೆಸಿಪಿ

ಅಣಬೆಯನ್ನು ಬಳಸಿ ಮಾಡುವ ಖಾದ್ಯಗಳೆಂದರೆ ಅನೇಕರಿಗೆ ಅಚ್ಚುಮೆಚ್ಚು. ನೆನಪಿಸಿಕೊಂಡರೆ ಸಾಕು ಬಾಯಲ್ಲಿ ನೀರು ಬರುತ್ತದೆ. ವಿಶೇಷವಾದ ಅಣಬೆ ಸೂಪ್ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

150 ಗ್ರಾಂ ಅಣಬೆ, 2 ಸ್ಪೂನ್ ಕಡಲೆ ಹಿಟ್ಟು, 5 -6 ಎಸಳು ಕೊತಂಬರಿ ಸೊಪ್ಪು, 1 ದೊಡ್ಡ ಈರುಳ್ಳಿ, 1 ದೊಡ್ಡ ಟೊಮ್ಯಾಟೊ, 1 ಸ್ಪೂನ್ ಕರಿಮೆಣಸು, ಎಣ್ಣೆ ಮತ್ತು ಉಪ್ಪು ಅಗತ್ಯವಿರುವಷ್ಟು.

ತಯಾರಿಸುವ ವಿಧಾನ:

ಅಣಬೆಯನ್ನು ಕತ್ತರಿಸಿ ಬಾಡಿಸಿಕೊಳ್ಳಿ. 2 ಸ್ಪೂನ್ ಕಡಲೆ ಹಿಟ್ಟನ್ನು ನೀರಿನಲ್ಲಿ ತೆಳ್ಳಗೆ ಕಲೆಸಿಡಿ. ಟೊಮ್ಯಾಟೊ ಬೇಯಿಸಿ, ಈರುಳ್ಳಿಯನ್ನು ಕತ್ತರಿಸಿಕೊಂಡು ಎಣ್ಣೆಯಲ್ಲಿ ಬಾಡಿಸಿರಿ.

ಇದಕ್ಕೆ ಅಣಬೆಯನ್ನು ಹಾಕಿ, ಬೇಯಿಸಿದ ಟೊಮ್ಯಾಟೊ ಹಿಚುಕಿ ಹಾಕಿರಿ. ಕಲೆಸಿದ ಕಡಲೆ ಹಿಟ್ಟನ್ನು ಹಾಕಿ ಕರಿಮೆಣಸಿನ ಪುಡಿಯನ್ನು ಬೆರೆಸಿರಿ.

ಕೊತಂಬರಿ ಸೊಪ್ಪು ಸೇರಿಸಿ ನೀರು ಹಾಕಿ, 5 -6 ನಿಮಿಷ ಕುದಿಸಿ ಕೆಳಗೆ ಇಳಿಸಿ ಬಿಸಿಯಾಗಿರುವಾಗಲೇ ಕೊಡಿ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular