HomeKarnatakaBIG NEWS : ರಾಜ್ಯದ 'ಗ್ರಾಮ ಪಂಚಾಯಿತಿ' ನೌಕರರಿಗೆ ಸಿಗುವ ವೇತನ, ಭತ್ಯೆ, ಸೌಲಭ್ಯಗಳೇನು.? ಇಲ್ಲಿದೆ...

BIG NEWS : ರಾಜ್ಯದ ‘ಗ್ರಾಮ ಪಂಚಾಯಿತಿ’ ನೌಕರರಿಗೆ ಸಿಗುವ ವೇತನ, ಭತ್ಯೆ, ಸೌಲಭ್ಯಗಳೇನು.? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ಕರ್ನಾಟಕ ಸರ್ಕಾರದ ನಿಯಮಗಳ ಪ್ರಕಾರ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಕಾರ್ಮಿಕ ಇಲಾಖೆಯು ಕಾಲಕಾಲಕ್ಕೆ ನಿಗದಿಪಡಿಸುವ ಕನಿಷ್ಠ ವೇತನವನ್ನು (Minimum Wages) ನೀಡಲಾಗುತ್ತದೆ. ಪಂಚಾಯಿತಿಗಳು ತಮ್ಮ ಸ್ವಂತ ಸಂಪನ್ಮೂಲ ಮತ್ತು ಸರ್ಕಾರದ ಶಾಸನಬದ್ಧ ಅನುದಾನದಡಿ ಈ ವೇತನವನ್ನು ಭರಿಸುತ್ತವೆ.

ನೌಕರರಿಗೆ ಸಕಾಲದಲ್ಲಿ ವೇತನ ದೊರಕುವಂತೆ ಮಾಡಲು, ಸರ್ಕಾರವು ನೇರವಾಗಿ ವೇತನ ಪಾವತಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ.ಸರ್ಕಾರದ ಆದೇಶದಂತೆ ನೌಕರರಿಗೆ ಇ.ಎಸ್.ಐ (ESI), ಪಿ.ಎಫ್ (PF) ಮುಂತಾದ ಸೌಲಭ್ಯಗಳನ್ನು ನೀಡಲಾಗುತ್ತದೆ.

ಇತರೆ ಪ್ರಮುಖ ಸೌಲಭ್ಯಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ರಜೆ ಸೌಲಭ್ಯ: ನೌಕರರಿಗೆ 10 ದಿನಗಳ ಸಾಂದರ್ಭಿಕ ರಜೆ, 2 ದಿನಗಳ ನಿರ್ಬಂಧಿತ ರಜೆ, ಮಹಿಳಾ ನೌಕರರಿಗೆ 180 ದಿನಗಳ ಪ್ರಸೂತಿ ರಜೆ ಮತ್ತು ಪುರುಷ ನೌಕರರಿಗೆ 15 ದಿನಗಳ ಪಿತೃತ್ವ ರಜೆ ನೀಡಲಾಗುತ್ತದೆ.
  • ಅನುಕಂಪದ ನೇಮಕಾತಿ: ಸೇವೆಯಲ್ಲಿದ್ದಾಗ ನೌಕರ ಮರಣ ಹೊಂದಿದಲ್ಲಿ, ಅವರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಪಡೆಯಲು ಅವಕಾಶವಿದೆ.
  • ನಿವೃತ್ತಿ ಮತ್ತು ಮರಣೋತ್ತರ ಉಪದಾನ: ಸೇವೆ ಸಲ್ಲಿಸಿದ ಅವಧಿಯ ಆಧಾರದ ಮೇಲೆ 15 ದಿನಗಳ ವೇತನದಂತೆ, ಗರಿಷ್ಠ 20 ತಿಂಗಳ ವೇತನ ಮೀರದಂತೆ ಉಪದಾನ ನೀಡಲಾಗುತ್ತದೆ.
  • ಶವಸಂಸ್ಕಾರಕ್ಕೆ ನೆರವು: ಸೇವೆಯಲ್ಲಿದ್ದಾಗ ನೌಕರರು ಮೃತಪಟ್ಟರೆ, ಅವರ ಕುಟುಂಬಕ್ಕೆ ಶವಸಂಸ್ಕಾರಕ್ಕಾಗಿ 10,000 ರೂ.ಗಳನ್ನು ಪಂಚಾಯಿತಿ ಸಂಪನ್ಮೂಲದಿಂದ ಭರಿಸಲು ಅವಕಾಶ ಕಲ್ಪಿಸಲಾಗಿದೆ.
  • ವಿಮಾ ಯೋಜನೆಗಳು: ನೌಕರರಿಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ, ಪ್ರಧಾನ ಮಂತ್ರಿ ಸುರಕ್ಷಾ ಜ್ಯೋತಿ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ಗ್ರೂಪ್ ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್ ಯೋಜನೆಗಳನ್ನು ಕಡ್ಡಾಯವಾಗಿ ಮಾಡಿಸಲು ಸೂಚಿಸಲಾಗಿದೆ.
  • ವೈದ್ಯಕೀಯ ನೆರವು: ಕೋವಿಡ್-19 ಅಥವಾ ಇತರೆ ತೀವ್ರ ಸ್ವರೂಪದ ಕಾಯಿಲೆಗಳಾದ ಹೃದಯ ಶಸ್ತ್ರಚಿಕಿತ್ಸೆ, ಕ್ಯಾನ್ಸರ್, ಡಯಾಲಿಸಿಸ್ ಇತ್ಯಾದಿಗಳಿಗೆ ವೈದ್ಯಕೀಯ ವೆಚ್ಚ ಭರಿಸಲು ಆಶ್ವಾಸನೆ ನಿಧಿಯಿಂದ ಗರಿಷ್ಠ 50,000 ರೂ.ಗಳವರೆಗೆ ಪರಿಹಾರ/ವೆಚ್ಚ ನೀಡಲು ಆದೇಶಿಸಲಾಗಿದೆ.
  • ಬಡ್ತಿ ಮತ್ತು ನೇಮಕಾತಿ: ಖಾಲಿ ಇರುವ ಹುದ್ದೆಗಳಿಗೆ ಜೇಷ್ಠತಾ ಪಟ್ಟಿ ಆಧಾರದ ಮೇಲೆ ಬಡ್ತಿ ಪಡೆಯಲು ಮತ್ತು ಗ್ರೇಡ್-2 ಕಾರ್ಯದರ್ಶಿ/ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳಿಗೆ ನೇರ ನೇಮಕಾತಿ ಕೋಟಾದಡಿ ಭರ್ತಿ ಮಾಡಲು ಅವಕಾಶವಿದೆ.
ಹುದ್ದೆಮೂಲ ವೇತನ (ರೂ.)ವ್ಯತ್ಯಾಸವಾಗುವ ತುಟ್ಟಿಭತ್ಯೆ (ರೂ.)ಒಟ್ಟು ವೇತನ (ರೂ.)
ಬಿಲ್ ಕಲೆಕ್ಟರ್15,196.722,223.6017,420.32
ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್15,196.722,223.6017,420.32
ವಾಟರ್ ಆಪರೇಟರ್13,509.322,223.6015,732.92
ಅಟೆಂಡೆಂಟ್12,873.522,223.6015,097.12
ಕ್ಲೀನರ್ಸ್16,019.522,223.6018,243.12

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular