HomeKarnatakaಗ್ಯಾಸ್ ಸಿಲಿಂಡರ್ ಪೂರೈಕೆ ತೊಂದರೆ ಇದ್ದಲ್ಲಿ ಗ್ರಾಹಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಗ್ಯಾಸ್ ಸಿಲಿಂಡರ್ ಪೂರೈಕೆ ತೊಂದರೆ ಇದ್ದಲ್ಲಿ ಗ್ರಾಹಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಹಾಸನ: ಜಿಲ್ಲೆಯ ಎಲ್ಲಾ ಗೃಹಬಳಕೆ ಅಡುಗೆ ಅನಿಲ ಗ್ಯಾಸ್ ಸಿಲಿಂಡರ್ ಉಪಯೋಗಿಸುವ ಗ್ರಾಹಕರಿಗೆ ತಿಳಿಯಪಡಿಸುವುದೆನೆಂದರೆ, ಜಿಲ್ಲೆಯಲ್ಲಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ಗಳ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವುದರಿಂದ ಎಲ್.ಪಿ.ಜಿ. ಸಿಲಿಂಡರ್ ಗಳ ಸರಬರಾಜಿನ ಬಗ್ಗೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ.

ಗ್ರಾಹಕರು ಆತಂಕದಲ್ಲಿ ಅನಗತ್ಯ ಬುಕಿಂಗ್ ಮಾಡದಿರಲು ತಿಳಿಸಿದೆ. ಇ-ಕೆವೈಸಿ ಮಾಡಿರುವ ಗ್ರಾಹಕರು ತಮ್ಮ ರಿಜಿಸ್ಟರ್ ಮೊಬೈಲ್ ನಂಬರ್ ಮೂಲಕ ಅನಿಲ ಸಿಲಿಂಡರ್ ಗಳ ಬುಕಿಂಗ್ ಅನ್ನು INDIAN OIL CORPORATION  ಸಂಬಂಧಿಸಿದಂತೆ Whatsapp no: 7588888824, Missed call no: 8454955555, SMS/IVRS booking no: 7718955555. CzÉÃ jÃw BHARAT PETROLEUM CORPORATION LIMITED ಸಂಬಂಧಿಸಿದಂತೆ Whatsapp no: 1800224344, Missed call no: 7710955555, SMS/IVRS booking no: 7715012345  ಹಾಗೂ HINDUSTAN PETROLEUM CORPORATION LIMITED ಸಂಬಂಧಿಸಿದಂತೆ Whatsapp no: 9222201122, Missed call no: 9493602222, Any time no: 8888823456 ಮೂಲಕ ಈ ಮೇಲಿನ ನಂಬರ್ ಗಳಿಗೆ ಬುಕಿಂಗ್ ಮಾಡಲು ಅವಕಾಶವಿರುತ್ತದೆ.

ಗ್ರಾಹಕರು ಒಮ್ಮೆ ಬುಕಿಂಗ್ ಮಾಡಿದ ನಂತರ 25 ದಿನಗಳ ನಂತರ ಬುಕಿಂಗ್ ಮಾಡಲು ಅವಕಾಶವಿರುತ್ತದೆ. (ಉದಾ: ಮಾರ್ಚ್ 01 ನೇ ತಾರೀಖಿನೊಂದು ಬುಕಿಂಗ್ ಮಾಡಿದಲ್ಲಿ ಮಾರ್ಚ್ 26 ನೇ ತಾರೀಖಿನ ನಂತರ ಮತ್ತೊಮ್ಮೆ ಬುಕಿಂಗ್ ಮಾಡಲು ಅವಕಾಶವಿರುತ್ತದೆ).

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗ್ರಾಹಕರ GOOGLE PLAY STORE, APPLE STORE ªÀÄÆ®PÀªÀÅ HPCL, BPCL, IOCL APP ಮೂಲಕವು ಸಹ ಬುಕಿಂಗ್ ಮಾಡಲು ಅವಕಾಶವಿರುತ್ತದೆ. ಬುಕಿಂಗ್ ಮಾಡಿರುವ ಅನಿಲ ಗ್ರಾಹಕರಿಗೆ OTP ಮುಖಾಂತರ ಸಿಲಿಂಡರ್ ಸರಬರಾಜು ವ್ಯವಸ್ಥೆ ಇದ್ದು, ತಮ್ಮ ಮೊಬೈಲ್ ನಂ. ಗೆ ಬಂದಿರುವ OTP ಅನ್ನು DELIVERY BOY ಗೆ ತಿಳಿಸಿ ಗ್ಯಾಸ್ ಸಿಲಿಂಡರ್ ಅನ್ನು ಪಡೆಯಲು ತಿಳಿಸಿದೆ. ಗ್ಯಾಸ್ ಏಜೆನ್ಸಿಗಳಲ್ಲಿ ಸೇಲ್ಸ್ ಆಫೀಸರ್ ರವರ ಮೊಬೈಲ್ ಸಂಖ್ಯೆ ಲಭ್ಯವಿದ್ದು ಅವರನ್ನು ಸಹ ಸಂಪರ್ಕಿಸಲು ತಿಳಿಸಿದೆ.

 ಗ್ರಾಹಕರಿಗೆ ಗೃಹಬಳಕೆ ಅನಿಲ ಸಿಲಿಂಡರ್ ಕುರಿತು ಯಾವುದೇ ಸಮಸ್ಯೆ ಇದ್ದಲ್ಲಿ ಹತ್ತಿರದ ಗ್ಯಾಸ್ ಏಜೆನ್ಸಿ, ತಾಲ್ಲೂಕಿನ ತಹಸೀಲ್ದಾರ್ ಕಛೇರಿಯ ಆಹಾರ ಶಾಖೆಯನ್ನು ಹಾಗೂ ಜಿಲ್ಲೆಯಲ್ಲಿನ ಜಂಟಿ ನಿರ್ದೇಶಕರ ಕಛೇರಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಹಾಸನ ಜಿಲ್ಲೆಯ ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ.

 ಹೆಚ್ಚಿನ ಮಾಹಿತಿಗಾಗಿ: ಜಂಟಿ ನಿರ್ದೇಶಕರ ಕಾರ್ಯಾಲಯ, ಹಾಸನ ಜಿಲ್ಲೆ, ಹಾಸನ 9916326521, 08172-268229, ಆಲೂರು ತಾಲ್ಲೂಕು ಆಹಾರ ನಿರೀಕ್ಷಕರು 9845012272,ಅರಕಲಗೂಡು ತಾಲ್ಲೂಕು ಆಹಾರ ಶಿರಸ್ತೇದಾರರು 8970353599, ಆಹಾರ ನಿರೀಕ್ಷಕರು9880292823,ಅರಸೀಕೆರೆ ತಾಲ್ಲೂಕು ಆಹಾರ ನಿರೀಕ್ಷಕರು 9380328907,ಆಹಾರ ನಿರೀಕ್ಷಕರು 9844771286, ಬೇಲೂರು ತಾಲ್ಲೂಕು ಆಹಾರ ನಿರೀಕ್ಷಕರು 8861665723, ಆಹಾರ ನಿರೀಕ್ಷಕರು 9483822244, ಚನ್ನರಾಯಪಟ್ಟಣ ತಾಲ್ಲೂಕು ಆಹಾರ ಶಿರಸ್ತೇದಾರರು 9964244343, ಆಹಾರ ನಿರೀಕ್ಷಕರು 6364309328, ಹಾಸನ ತಾಲ್ಲೂಕು ಆಹಾರ ನಿರೀಕ್ಷಕರು 9740290428, ಆಹಾರ ನಿರೀಕ್ಷಕರು 9845872348, ಹಾಸನ ನಗರ ಆಹಾರ ನಿರೀಕ್ಷಕರು 9886168827, ಹೊಳೆನರಸೀಪುರ ತಾಲ್ಲೂಕು ಆಹಾರ ಶಿರಸ್ತೇದಾರರು 900892007, ಆಹಾರ ನಿರೀಕ್ಷಕರು 9902737134,10 ಸಕಲೇಶಪುರ ತಾಲ್ಲೂಕು ಆಹಾರ ಶಿರಸ್ತೇದಾರರು 9902382986, ಆಹಾರ ನಿರೀಕ್ಷಕರು 9481258935

ಅನಧಿಕೃತವಾಗಿ ಗ್ಯಾಸ್ ಸಿಲಿಂಡರ್ಗಳ ಅಕ್ರಮ ದಾಸ್ತಾನು/ಸಾಗಾಣಿಕೆ/Refilling ಪ್ರಕರಣಗಳು ಕಂಡುಬಂದಲ್ಲಿ Essential Commodities Act 1955 and Petroleum Products (Maintenance of Production Storage and Supply) Order 1999 and LPG Control Order 2000 ರಡಿ ಕಟ್ಟುನಿಟ್ಟಿನ ಕ್ರಮಕೈಗೊಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular