HomeHealthಬಿಡದೇ ಕಾಡುವ 'ಮೈಗ್ರೇನ್' ಗೆ ಇಲ್ಲಿದೆ ಸರಳ ಮದ್ದು....!

ಬಿಡದೇ ಕಾಡುವ ‘ಮೈಗ್ರೇನ್’ ಗೆ ಇಲ್ಲಿದೆ ಸರಳ ಮದ್ದು….!

ತಲೆ ಮತ್ತು ಕಣ್ಣಿನ ಒಂದು ಬದಿಯಲ್ಲಿ ತೀವ್ರವಾದ ನೋವು ಕಾಣಿಸಿಕೊಂಡರೆ, ಆಯಾಸ, ಕಿರಿಕಿರಿ ಇವನ್ನೆಲ್ಲ ನೀವು ಅನುಭವಿಸ್ತಾ ಇದ್ರೆ ಮೈಗ್ರೇನ್ ನಿಂದ ಬಳಲುತ್ತಿದ್ದೀರಾ ಎಂದರ್ಥ. ಮೈಗ್ರೇನ್ ದೇಹವನ್ನು ಸಂಪೂರ್ಣ ದುರ್ಬಲಗೊಳಿಸುತ್ತದೆ. ಕೆಲವರಿಗೆ ವಾಂತಿ, ಮರಗಟ್ಟುವಿಕೆ, ಮಾತನಾಡಲು ಸಮಸ್ಯೆ ಹೀಗೆ ಹಲವು ಬಗೆಯ ತೊಂದರೆಗಳು ಮೈಗ್ರೇನ್ ನಿಂದ್ಲೇ ಶುರುವಾಗುತ್ತವೆ.

ಮೈಗ್ರೇನ್ ಗೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ವೈದ್ಯರ ಪ್ರಕಾರ ಹಾರ್ಮೋನುಗಳ ಬದಲಾವಣೆ, ಒತ್ತಡ, ಆತಂಕ, ನಿರ್ಜಲೀಕರಣ ಹೀಗೆ ಹಲವು ಅಂಶಗಳು ಮೈಗ್ರೇನ್ ಗೆ ಕಾರಣವಾಗುತ್ತವೆ. ಮೈಗ್ರೇನ್ ನೋವಿಗೆ ಹಲವು ನೈಸರ್ಗಿಕ ಪರಿಹಾರಗಳಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಶೋಧನೆಯ ಪ್ರಕಾರ ದೇಹದ ಮೇಲೆ ಕೆಲವು ನಿರ್ದಿಷ್ಟ ಅಂಶಗಳಿಗೆ ಒತ್ತಡ ಹೇರುವುದು ಮೈಗ್ರೇನ್‌ನ ರೋಗಲಕ್ಷಣಗಳಿಂದ ಪರಿಹಾರ ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಆಕ್ಯುಪ್ರೆಶರ್ ನೋವು ನಿವಾರಣೆಗೆ ಅತ್ಯಂತ ಪರಿಣಾಮಕಾರಿ ಚಿಕಿತ್ಸೆ. ಒತ್ತಡದ ಬಿಂದುಗಳನ್ನು ಉತ್ತೇಜಿಸುವುದರಿಂದ ವಾಕರಿಕೆ ಹಾಗೂ ಮಲವಿಸರ್ಜನೆ ಸಮಸ್ಯೆ ನಿವಾರಣೆಯಾಗುತ್ತದೆ.

ಎಸ್ಸೆನ್ಷಿಯಲ್ ಆಯಿಲ್ ಕೂಡ ಮೈಗ್ರೇನ್ ಗೆ ಮದ್ದು. ಅರೋಮಾಥೆರಪಿಗೆ ಈ ತೈಲವನ್ನು ಬಳಸಲಾಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಪುದೀನಾ, ರೋಸ್ಮರಿ ಮತ್ತು ಲ್ಯಾವೆಂಡರ್ ಎಣ್ಣೆಗಳನ್ನು ಹಚ್ಚುವ ಮೂಲಕ ಮೈಗ್ರೇನ್‌ಗೆ ಚಿಕಿತ್ಸೆ ನೀಡಬಹುದು ಮತ್ತು ನಿಮ್ಮ ಸ್ನಾಯುಗಳನ್ನು ಸಡಿಲಗೊಳಿಸಬಹುದು.

ಇದಲ್ಲದೆ ಬಿ-ಕಾಂಪ್ಲೆಕ್ಸ್ ವಿಟಮಿನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಇದು ದೇಹಕ್ಕೆ ಶಕ್ತಿ ನೀಡುತ್ತದೆ. ಬಾದಾಮಿ, ಅವಕಾಡೊ, ಮೊಟ್ಟೆ, ಹಾಲು, ಮೀನು ಇತ್ಯಾದಿ ಆಹಾರಗಳಲ್ಲಿರುವ ವಿಟಮಿನ್ ಬಿ 2, ಬಿ 6 ಮತ್ತು ಬಿ 12 ತಲೆನೋವು ಮತ್ತು ಇತರ ಮೈಗ್ರೇನ್ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular