HomeHealthತುರಿಕೆ ಸಮಸ್ಯೆಗೆ ಇಲ್ಲಿದೆ ಮನೆಮದ್ದು

ತುರಿಕೆ ಸಮಸ್ಯೆಗೆ ಇಲ್ಲಿದೆ ಮನೆಮದ್ದು

ವಿನಾಕಾರಣ ದೇಹದ ಅಲ್ಲಲ್ಲಿ ಕಾಣಿಸಿಕೊಳ್ಳುವ ತುರಿಕೆ ಸಮಸ್ಯೆ ದೇಹದ ತುಂಬೆಲ್ಲಾ ಹರಡಿ ಅಲ್ಲಲ್ಲಿ ದದ್ದುಗಳನ್ನು ಮೂಡಿಸುತ್ತವೆ.

ಇದರ ನಿವಾರಣೆಗೆ ಈ ಮನೆ ಮದ್ದುಗಳನ್ನು ಮಾಡಿ ನೋಡಿ.

ದೇಹದ ಯಾವ ಭಾಗ ವಿಪರೀತ ತುರಿಸುತ್ತದೆಯೋ ಆ ಭಾಗವನ್ನು ಸ್ವಚ್ಛವಾಗಿ ತೊಳೆಯಿರಿ. ಬಳಿಕ ಅಲೋವೇರಾ ಜೆಲ್ ಅನ್ನು ಲೇಪಿಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಿನಕ್ಕೆ ಎರಡರಿಂದ ಮೂರು ಬಾರಿ ಹೀಗೆ ಮಾಡುವುದರಿಂದ ತುರಿಕೆ ಸಮಸ್ಯೆ ದೂರವಾಗುತ್ತದೆ.

ಟೀಟ್ರೀ ಎಣ್ಣೆಯಲ್ಲಿ ನಂಜು ನಿರೋಧಕ ಗುಣವಿದ್ದು ಇದನ್ನು ಮೊಡವೆಯಂಥ ಸಮಸ್ಯೆಗಳನ್ನು ದೂರ ಮಾಡಲೂ ಬಳಸಲಾಗುತ್ತದೆ. ತುರಿಕೆಗೆ ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆ ಜೊತೆ ಟೀಟ್ರೀ ಎಣ್ಣೆಯನ್ನು ಬಳಸುವುದರಿಂದ ಸಮಸ್ಯೆ ಬಹುಬೇಗ ದೂರವಾಗುತ್ತದೆ.

ಐಸ್ ಪ್ಯಾಕ್ ಅನ್ನು ತುರಿಕೆ ಇರುವ ಜಾಗಕ್ಕೆ ಇಡುವುದರಿಂದ ಅಥವಾ ಮಸಾಜ್ ಮಾಡುವುದರಿಂದ ಈ ಸಮಸ್ಯೆ ಬಹುಬೇಗ ಮಾಯವಾಗುತ್ತದೆ. ತೆಂಗಿನೆಣ್ಣೆಯೂ ಅತ್ಯುತ್ತಮ ಔಷಧೀಯ ಗುಣಗಳನ್ನು ಹೊಂದಿದ್ದು ಎಲ್ಲಾ ಬಗೆಯ ತ್ವಚೆಗಳಿಗೂ ಇದನ್ನು ಅನ್ವಯಿಸಬಹುದು.

For Latest News Updates, Join Our Whatsapp Community🚩
RELATED ARTICLES

Most Popular