HomeFeatured Newsಇಲ್ಲಿದೆ ರುಚಿ ರುಚಿಯಾದ ರವೆ 'ಟೋಸ್ಟ್' ರೆಸಿಪಿ

ಇಲ್ಲಿದೆ ರುಚಿ ರುಚಿಯಾದ ರವೆ ‘ಟೋಸ್ಟ್’ ರೆಸಿಪಿ

ರವೆಯಲ್ಲಿ ವಿಟಮಿನ್ ಎ, ಬಿ, ಸಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸೋಡಿಯಂ ಗುಣಗಳಿವೆ. ಇದರಿಂದ ವಿಶೇಷ ಬಗೆಯ ಫ್ರೆಂಚ್ ಶೈಲಿಯ ಟೋಸ್ಟ್ ತಯಾರಿಸಬಹುದು. ಒಮ್ಮೆ ಸವಿದರೆ ಮತ್ತೆ ಮತ್ತೆ ತಿನ್ನಬೇಕು ಎನ್ನುವ ರುಚಿಕರವಾದ ಹಾಗೂ ಗರಿಗರಿಯಾದ ಟೋಸ್ಟ್ ಸರಳ ಹಾಗೂ ಸುಲಭ ವಿಧಾನದಲ್ಲಿ ತಯಾರಿಸಬಹುದು. ಇದರ ರೆಸಿಪಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು

ಬ್ರೆಡ್ ಸ್ಲೈಸ್ – 8 ರಿಂದ 10
ಸೂಜಿ ರವೆ – 150 ಗ್ರಾಂ
ಮೊಸರು – 100 ಗ್ರಾಂ
ನೀರು – ಅಗತ್ಯಕ್ಕೆ ತಕ್ಕಷ್ಟು
ಕಾಳುಮೆಣಸು – 1/2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಸಕ್ಕರೆ – 1 ಟೇಬಲ್ ಚಮಚ
ಈರುಳ್ಳಿ- 1 ಹೆಚ್ಚಿರುವುದು
ಟೊಮ್ಯಾಟೋ – 1 ಹೆಚ್ಚಿರುವುದು
ಹಸಿಮೆಣಸು – ಸ್ವಲ್ಪ
ಕ್ಯಾಪ್ಸಿಕಮ್ – 1/2 ಕಪ್
ಕೊತ್ತಂಬರಿ ಸೊಪ್ಪು – ಸ್ವಲ್ಪ
ಬೆಣ್ಣೆ/ತುಪ್ಪ – ಅಗತ್ಯಕ್ಕೆ ತಕ್ಕಷ್ಟು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ

ಒಂದು ಬೌಲ್‍ ನಲ್ಲಿ ಮೊಸರು, ಕರಿಮೆಣಸಿನ ಕಾಳು, ಸೂಜಿ ರವೆ, ಉಪ್ಪು ಮತ್ತು ಸಕ್ಕರೆ ಸೇರಿಸಿ. ಎಲ್ಲವನ್ನೂ ಮಿಶ್ರಗೊಳಿಸಿ ಹತ್ತು ನಿಮಿಷಗಳ ಕಾಲ ವಿಶ್ರಮಿಸಲು ಬಿಡಿ. ಹೆಚ್ಚಿಕೊಂಡ ಈರುಳ್ಳಿ, ಟೊಮ್ಯಾಟೋ, ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಎಲ್ಲವನ್ನೂ ಸೇರಿಸಿ ಮಿಶ್ರಗೊಳಿಸಿ.

ಈ ಮಿಶ್ರಣವನ್ನು ಬ್ರೆಡ್‍ನ ಸ್ಲೈಸ್ ಮೇಲೆ ಹರಡಿ. ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಅಥವಾ ಬೆಣ್ಣೆಯನ್ನು ಸವರಿ ಬ್ರೆಡ್ ಸ್ಲೈಸ್ ಅನ್ನು ಎರಡು ಬದಿಯಲ್ಲೂ ಹೊಂಬಣ್ಣ ಬರುವವರೆಗೆ ಹುರಿಯಬೇಕು. ಕೊನೆಯಲ್ಲಿ ತ್ರಿಭುಜಾಕೃತಿಯಲ್ಲಿ ಕತ್ತರಿಸಿ, ಬಿಸಿ ಇರುವಾಗಲೇ ರವೆ ಟೋಸ್ಟ್ ಸವಿಯಲು ನೀಡಿ.

For Latest News Updates, Join Our Whatsapp Community🚩
RELATED ARTICLES

Most Popular