HomeLatest Newsಬಟ್ಟೆ ಮೇಲೆ ಎಣ್ಣೆ ಕಲೆಯಾಗಿದ್ರೆ ತೆಗೆಯಲು ಇಲ್ಲಿದೆ ಟಿಪ್ಸ್

ಬಟ್ಟೆ ಮೇಲೆ ಎಣ್ಣೆ ಕಲೆಯಾಗಿದ್ರೆ ತೆಗೆಯಲು ಇಲ್ಲಿದೆ ಟಿಪ್ಸ್

ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಬಟ್ಟೆಯ ಮೇಲೆ ಎಣ್ಣೆಯ ಜಿಡ್ಡು ಅಂಟಿಕೊಳ್ಳುವುದು, ಕಲೆಯಾಗುವುದು ಆಗುತ್ತಿರುತ್ತದೆ. ಇದು ವಾಶ್ ಮಾಡಿದರೆ ಸುಲಭವಾಗಿ ಹೋಗುವುದಿಲ್ಲ. ಹಾಗಾಗಿ ಈ ಎಣ್ಣೆ ಕಲೆಗಳನ್ನು ನಿವಾರಿಸಲು ಈ ಟಿಪ್ಸ್ ನ್ನು ಫಾಲೋ ಮಾಡಿ.

*ಅಡುಗೆ ಸೋಡಾ ಯಾವುದೇ ಕಲೆಗಳನ್ನು ನಿವಾರಿಸುತ್ತದೆ. ಹಾಗಾಗಿ ಎಣ್ಣೆ ಕಲೆ ಇರುವ ಕಡೆ ಅಡುಗೆ ಸೋಡಾದ ಪೇಸ್ಟ್ ಹಾಕಿ ಸ್ವಲ್ಪ ಹೊತ್ತು ಬಿಟ್ಟು ಬ್ರಶ್ ನಿಂದ ಉಜ್ಜಿ ವಾಶ್ ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಆಲ್ಕೋಹಾಲ್ ಎಣ್ಣೆ ಕಲೆಗಳನ್ನು ತೆಗೆಯಲು ಸಹಕಾರಿ. ಇದು ಬಟ್ಟೆಯ ಬಣ್ಣಗಳಿಗೆ ಹಾನಿ ಮಾಡದೇ ಕಲೆಗಳನ್ನು ನಿವಾರಿಸುತ್ತದೆ. ಹಾಗಾಗಿ 4 ಹನಿ ಆಲ್ಕೋಹಾಲ್ ನ್ನು ಕಲೆ ಇರುವ ಕಡೆ ಹಾಕಿ ಸ್ವಲ್ಪ ಹೊತ್ತು ಬಿಟ್ಟು ಉಜ್ಜಿ ತೊಳೆದರೆ ಕಲೆ ಹೋಗುತ್ತದೆ.

*ಹಾಗೇ ಹೈಡ್ರೋಜನ್ ಪೆರಾಕ್ಸೈಡ್ ಕೂಡ ಕಲೆ ನಿವಾರಿಸಲು ಸಹಾಯಕಾರಿಯಾಗಿದೆ. ಹೈಡ್ರೋಜನ್ ಪೆರಾಕ್ಸೈಡ್ ಗೆ ನಿಂಬೆ ರಸ ಮಿಕ್ಸ್ ಮಾಡಿ ಕಲೆ ಇರುವ ಕಡೆ ಹಚ್ಚಿ ತೊಳೆದರೆ ಎಣ್ಣೆ ಜಿಡ್ಡಿನ ಕಲೆಗಳೆಲ್ಲಾ ನಿವಾರಣೆಯಾಗುತ್ತವೆ.

For Latest News Updates, Join Our Whatsapp Community🚩
RELATED ARTICLES

Most Popular