HomeLatest Newsಗ್ಯಾಸ್ ಬರ್ನರ್ ಸುಲಭವಾಗಿ ಕ್ಲೀನ್ ಮಾಡಲು ಇಲ್ಲಿವೆ ಟಿಪ್ಸ್

ಗ್ಯಾಸ್ ಬರ್ನರ್ ಸುಲಭವಾಗಿ ಕ್ಲೀನ್ ಮಾಡಲು ಇಲ್ಲಿವೆ ಟಿಪ್ಸ್

ಅಡುಗೆ ಮಾಡುವುದಕ್ಕಿಂತಲೂ ಅಡುಗೆ ಮನೆಯನ್ನು ಸ್ವಚ್ಛ ಮಾಡುವುದು ಹೆಂಗಳೆಯರಿಗೆ ಒಂದು ದೊಡ್ಡ ತಲೆನೋವು. ಅದರಲ್ಲೂ ಈ ಗ್ಯಾಸ್ ಬರ್ನರ್ ಮೇಲೆ ಉಕ್ಕಿ ಬಿದ್ದ ಹಾಲು, ಜಿಡ್ಡಿನಂಶವನ್ನು ಎಷ್ಟೇ ತಿಕ್ಕಿದರೂ ಹೋಗದೇ ಅಂಟಿ ಕುಳಿತುಕೊಂಡಿರುತ್ತದೆ.

ಇದನ್ನು ಕ್ಲೀನ್ ಮಾಡಲು ಸುಲಭವಾದ ವಿಧಾನ ಇಲ್ಲಿದೆ ನೋಡಿ.

* ಮೊದಲಿಗೆ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಡಿಟರ್ಜೆಂಟ್ ಪೌಡರ್ ಹಾಕಿ ನಿಮ್ಮ ಗ್ಯಾಸ್ ಬರ್ನರ್ ಅನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ 2 ಚಮಚ ಬೇಕಿಂಗ್ ಸೋಡಕ್ಕೆ ಸ್ವಲ್ಪ ನೀರು ಸೇರಿಸಿ ಅದನ್ನು ದಪ್ಪಗಿನ ಪೇಸ್ಟ್ ರೀತಿ ಮಾಡಿಕೊಂಡು ಇದನ್ನು ಗ್ಯಾಸ್ ಬರ್ನರ್ ಗೆ ಹಚ್ಚಿ. ಈ ಮಿಶ್ರಣವನ್ನು ಅರ್ಧಗಂಟೆ ಹಾಗೇಯೇ ಇಟ್ಟುಬಿಡಿ. ನಂತರ ಪಾತ್ರೆ ತೊಳೆಯುವ ಬ್ರಷ್ ನಿಂದ ತಿಕ್ಕಿದರೆ ಗ್ಯಾಸ್ ಬರ್ನರ್ ಕ್ಲೀನ್ ಆಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಅರ್ಧ ಕಪ್ ವಿನೆಗರ್ ಗೆ ಅರ್ಧ ಕಪ್ ನೀರನ್ನು ಸೇರಿಸಿಕೊಳ್ಳಿ. ಅದರಲ್ಲಿ ಕೊಳೆಯಾದ ಗ್ಯಾಸ್ ಬರ್ನರ್ ಅನ್ನು ಇಡೀ ರಾತ್ರಿ ನೆನೆಸಿಡಿ. ಬೆಳಿಗ್ಗೆ ಪಾತ್ರೆ ಉಜ್ಜುವ ಬ್ರೆಷ್ ನಿಂದ ತಿಕ್ಕಿ ತೊಳೆದರೆ ಕಪ್ಪು ಕಲೆಗಳೆಲ್ಲಾ ಮಾಯಾವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular