HomeHealthಇಲ್ಲಿದೆ ನೋಡಿ‌ ʼಮಧುಮೇಹʼದ ಲಕ್ಷಣಗಳು

ಇಲ್ಲಿದೆ ನೋಡಿ‌ ʼಮಧುಮೇಹʼದ ಲಕ್ಷಣಗಳು

ವಯಸ್ಸು 40 ಸಮೀಪಿಸುತ್ತಿದ್ದಂತೆ ಮಹಿಳೆಯರಲ್ಲೂ ಮಧುಮೇಹದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಪ್ರತಿ ಬಾರಿ ವೈದ್ಯರ ಬಳಿ ಹೋಗುವ ಬದಲು ಈ ಲಕ್ಷಣಗಳು ಕಂಡರೆ ಮಾತ್ರ ವೈದ್ಯರ ಬಳಿ ತೆರಳುವುದು ಜಾಣತನ.

ದೇಹ ತೂಕದಲ್ಲಿ ಭಾರಿ ಬದಲಾವಣೆಯಾದರೆ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಇದು ಮಧು ಮೇಹದ ಮೊದಲ ಲಕ್ಷಣ.

ಆಗಾಗ ಮೂತ್ರ ವಿಸರ್ಜನೆಗೆ ತೆರಳಬೇಕು ಎನಿಸುವುದೂ ಇದರ ಲಕ್ಷಣವೇ ಇರಬಹುದು. ವಿಪರೀತ ಬಾಯಾರಿಕೆ, ಗಂಟಲು ಒಣಗಿದಂತೆ ಭಾಸವಾಗುವುದು ಇತ್ಯಾದಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಸಿವು ಹೆಚ್ಚಾಗಿ ನಿಶ್ಯಕ್ತಿಯಿಂದ ಬಳಲಿದ ಭಾವನೆ ವ್ಯಕ್ತವಾಗುತ್ತದೆ. ಲೈಂಗಿಕ ಚಟುವಟಿಕೆಗಳಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಅಡುಗೆ ಮನೆಯಲ್ಲಾದ ಸಣ್ಣ ಗಾಯವೂ ಮಾಯದೆ ಬಹುವಾಗಿ ಕಾಡುತ್ತದೆ. ಈ ಎಲ್ಲಾ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

For Latest News Updates, Join Our Whatsapp Community🚩
RELATED ARTICLES

Most Popular