HomeBeautyಮುಖದ ಮೇಲಿನ ಕಲೆ ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

ಮುಖದ ಮೇಲಿನ ಕಲೆ ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

ಮುಖದಲ್ಲಿ ಸಣ್ಣ ಗುಳ್ಳೆಗಳು ಮೂಡಿ ಅಲ್ಲೇ ತೂತುಗಳಾಗಿವೆಯೇ? ಅವು ನೋಡಲು ಅಸಹ್ಯ ಹುಟ್ಟಿಸುವಂತಿವೆಯೇ? ಅದನ್ನು ಹೋಗಲಾಡಿಸಲು ಹೀಗೆ ಮಾಡಿ.

ಮುಲ್ತಾನಿ ಮಿಟ್ಟಿಗೆ ಮೆಂತೆ ನೀರನ್ನು ಬೆರೆಸಿ ಕಲಸಿ. ಮುಖಕ್ಕೆ ಲೇಪಿಸಿಕೊಳ್ಳಿ. ಅರ್ಧ ಗಂಟೆ ಬಳಿಕ ತಣ್ಣನೆಯ ನೀರಿನಲ್ಲಿ ತೊಳೆಯಿರಿ. ವಾರಕ್ಕೊಮ್ಮೆ ಹೀಗೆ ಮಾಡುವುದರಿಂದ ಮುಖದ ತೂತುಗಳು ಮಾಯವಾಗುತ್ತದೆ.‌

‌ ಮಾರುಕಟ್ಟೆಯಲ್ಲಿ ಸಿಗುವ ಆಪಲ್ ಸೈಡರ್ ವಿನಿಗರ್ ಗೆ ತುಸು ನೀರು ಬೆರೆಸಿ ಮುಖದ ಮೇಲೆ ಸ್ಪ್ರೇ ಮಾಡಿಕೊಳ್ಳಿ. ಬಳಿಕ ಸೌತೆಕಾಯಿಗೆ ನಿಂಬೆರಸ ಅಥವಾ ಜೇನು ತುಪ್ಪ ಬೆರೆಸಿ ಮುಖದ ಮೇಲೆ ಮಸಾಜ್ ಮಾಡಿಕೊಳ್ಳಿ.

ಬಟ್ಟಲಿಗೆ ಅರಿಶಿನ ಪುಡಿ, ಅಲೋವೆರಾ ಜೆಲ್ ಮಿಶ್ರಣ ಮಾಡಿ ಮುಖದ ಮೇಲೆ ಹಚ್ಚಬೇಕು. ಒಂದು ಗಂಟೆ ಬಳಿಕ ತೊಳೆಯಬೇಕು. ಇದರಿಂದ ಮುಖ ನಯವಾಗುತ್ತದೆ ಮಾತ್ರವಲ್ಲ ಹೊಳೆಯುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular