HomeLatest NewsBIG NEWS: ಪ್ರವಾಸಿಗರಿಗೆ ನಿರಾಸೆ: ಮುಳ್ಳಯ್ಯನಗಿರಿ ಹೆಲಿಟೂರಿಸಂಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತಡೆ

BIG NEWS: ಪ್ರವಾಸಿಗರಿಗೆ ನಿರಾಸೆ: ಮುಳ್ಳಯ್ಯನಗಿರಿ ಹೆಲಿಟೂರಿಸಂಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತಡೆ

ಚಿಕ್ಕಮಗಳೂರು: ಕ್ರಿಸ್ ಮಸ್, ಹೊಸ ವರ್ಷಾಚರಣೆ ಹಾಗೂ ವೀಕೆಂಡ್ ಪ್ರವಾಸಿಗರಿಗಾಗಿ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಹೆಲಿಟೂರಿಸಂಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ತಾತ್ಕಾಲಿಕ ತಡೆ ನೀಡಿದೆ.

ಎ.ಯೋಗೇಶ್ವರನ್ ಹಾಗೂ ಬಿ.ಪೂಂಗಳಲಿ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮಂಡಳಿ ಮುಳ್ಳಯ್ಯನಗಿರಿ ಮೇಲೆ ಹೆಲಿಕಾಪ್ಟರ್ ಹಾರಾಟಕ್ಕೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತ ಸಾಲು, ಕಳಸ, ಮೂಡಿಗೆರೆ ಸುತ್ತಮುತ್ತ ಹೆಲಿಕಾಪ್ಟರ್ ಮೂಲಕವಾಗಿ ಪ್ರವಾಸಿಗರನ್ನು ಸುತ್ತಾಡಿಸುವ ಮೂಲಕ ಪ್ರವಾಸಿಗರಿಗೆ ಆಗಸದಿಂದ ಗಿರಿ-ಪರ್ವತಗಳ ದರ್ಶನಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸಿತ್ತು. ಆದರೆ ಮುಳ್ಳಯ್ಯನಗಿರಿಗೆ ಹೊಂದಿಕೊಂಡು ಭದ್ರಾ ವನ್ಯಜೀವಿ ಪ್ರದೇಶವಿದೆ. ಕಳಸ, ಮೂಡಿಗೆರೆಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನ ಹೊಂದಿಕೊಂಡಿದೆ ಹೆಲಿಟೂರಿಸಂ ನಡೆಸಿದರೆ ವನ್ಯಜೀವಿಗಳ ಆವಾಸಕ್ಕೆ ತೊಂದರೆಯಾಗಲಿದೆ. ಅಲ್ಲದೇ ಇದು ಪಕ್ಷಿಗಳು ಗೂಡುಕಟ್ಟುವ ಸಮಯವಾಗಿರುವುದರಿಂದ ಹೆಲಿಕಾಪ್ಟರ್ ಹಾರಾಟದ ಶಬ್ಧ ತೊಂದರೆ ಉಂಟುಮಾಡಲಿದೆ. ಇದು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದರಿಂದ ಹೆಲಿಟೂರಿಸಂಗೆ ಅವಕಾಶ ಕೊಡಬಾರದು ಎಂದು ಎಂದು ಅರ್ಜಿದಾರರು ವಾದ ಮಂಡಿಸಿದ್ದರು.

ಈ ಹಿನ್ನೆಲೆಯಲ್ಲಿ ಮುಳ್ಳಯ್ಯನಗಿರಿ ಮೇಲ್ಭಾಗದಲ್ಲಿ ಹೆಲಿಕಾಪ್ಟರ್ ಹಾರಾಡಿಸಬಾರದು. ಆದರೆ ಚಿಕ್ಕಮಗಳೂರು ನಗರದಲ್ಲಿ ಹೆಲಿಕಾಪ್ಟರ್ ಹಾರಾಟಕ್ಕೆ ಅವಕಾಶವಿದೆ ಎಂದು ನ್ಯಾಯಮಂಡಳಿ ತಿಳಿಸಿದ್ದು, ಮುಂದಿನ ವಿಚಾರಣೆ ಸೋಮವಾರಕ್ಕೆ ಮುಂದೂಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular