ಪುಟ್ಟ ಗೊರಿಲ್ಲಾ ಮರಿ ಮೊದಲ ಬಾರಿಗೆ ತನ್ನ ತಂದೆಯನ್ನು ಭೇಟಿಯಾಗುವ ಅಪೂರ್ವ ಕ್ಷಣದ ವಿಡಿಯೋವನ್ನ
ಸಾಮಾಜಿಕ ಮಾಧ್ಯಮದಲ್ಲಿ ಆಸಕ್ತಿದಾಯಕ ವನ್ಯಜೀವಿ ವೀಡಿಯೊಗಳನ್ನು ಹಂಚಿಕೊಳ್ಳಲು ಹೆಸರುವಾಸಿಯಾದ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ಅವರು ಹಂಚಿಕೊಂಡಿದ್ದಾರೆ.
13 ಸೆಕೆಂಡ್ ಕ್ಲಿಪ್ ನಲ್ಲಿ ತನ್ನ ತಂದೆಯನ್ನು ಮೊದಲ ಬಾರಿಗೆ ನೋಡುತ್ತಿರುವ ಮರಿ ಗೊರಿಲ್ಲಾದ ಮುದ್ದಾದ ಕ್ಷಣಗಳಿವೆ.
ಮರಿಯು ತನ್ನ ತಂದೆಯ ಮುಖವನ್ನು ಸ್ಪರ್ಶಿಸಲು ಕೈ ಚಾಚುತ್ತದೆ. ಈ ವೇಳೆ ತಂದೆ ಗೊರಿಲ್ಲಾ ಶಾಂತವಾಗಿ ನಿಂತಿರುತ್ತದೆ.
ಭಾವನಾತ್ಮಕ ವೀಡಿಯೊವು ಮಂಗ ಮತ್ತು ಮಾನವ ಭಾವನೆಗಳ ನಡುವಿನ ಸಾಮ್ಯತೆಗಳನ್ನು ಎತ್ತಿ ತೋರಿಸುತ್ತದೆ. ಇದಕ್ಕೆ ಮೂಕವಿಸ್ಮಿತರಾದ ಹಲವು ನೆಟ್ಟಿಗರು ಇದು ದೇವರ ಅದ್ಭುತ ಸೃಷ್ಟಿ ಎಂದಿದ್ದಾರೆ.
Baby Gorilla meets the Father for the first time💕 pic.twitter.com/bLOf0892jE
— Susanta Nanda IFS (Retd) (@susantananda3) May 7, 2023