HomeIndiaಶಾಲೆ ಮೆಟ್ಟಿಲು ಹತ್ತುತ್ತಿರುವಾಗಲೇ ಹೃದಯಾಘಾತ; 17 ವರ್ಷದ ಬಾಲಕಿ ಸಾವು

ಶಾಲೆ ಮೆಟ್ಟಿಲು ಹತ್ತುತ್ತಿರುವಾಗಲೇ ಹೃದಯಾಘಾತ; 17 ವರ್ಷದ ಬಾಲಕಿ ಸಾವು

ಸೂರತ್​: ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾಯುತ್ತಿರುವ ಘಟನೆ ಹೆಚ್ಚುತ್ತಿರುವ ನಡುವೆಯೇ, ಗುಜರಾತಿನ ನವಸಾರಿ ಜಿಲ್ಲೆಯಲ್ಲಿ 17 ವರ್ಷದ ಬಾಲಕಿ ತನಿಶಾ, ಇದೇ ರೀತಿ ಮೃತಪಟ್ಟಿದ್ದಾಳೆ. ಶಾಲೆಗೆ ಹೋಗುತ್ತಿರುವಾಗಲೇ ಹೃದಯಾಘಾತಕ್ಕೊಳಗಾಗಿದ್ದಾಳೆ. ಶಾಲೆಯ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದರೂ ಆಕೆ ಅದಾಗಲೇ ಪ್ರಾಣ ಕಳೆದುಕೊಂಡಿದ್ದಾಳೆ.

ನವಸಾರಿ ಜಿಲ್ಲೆಯ ಎ.ಬಿ. ಶಾಲೆಯಲ್ಲಿ 12ನೇ ತರಗತಿಯಲ್ಲಿ ಓದುತ್ತಿದ್ದ 17 ವರ್ಷದ ತನಿಶಾ ಗಾಂಧಿ ಮೃತಪಟ್ಟ ವಿದ್ಯಾರ್ಥಿನಿ. ಸ್ನೇಹಿತರೊಂದಿಗೆ ಮೆಟ್ಟಿಲು ಹತ್ತುತ್ತಿದ್ದಾಗ ಉಸಿರಾಟ ಸಮಸ್ಯೆ ಉಂಟಾಗಿ ದೇಹ ಬೆವರಲು ಶುರುವಾಗಿದೆ. ನಂತರ ಕೆಳಗೆ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತನೀಶಾ ತುಂಬಾ ಬುದ್ಧಿವಂತ ಹುಡುಗಿ. ನೀಟ್​ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಳು ಎಂದು ಪ್ರಾಚಾರ್ಯ ಅಮೃತ್ ಚತ್ರೋಲಾ ತಿಳಿಸಿದ್ದಾರೆ. ತನಿಶಾ ಎರಡು ವರ್ಷಗಳ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದಳು.

For Latest News Updates, Join Our Whatsapp Community🚩
RELATED ARTICLES

Most Popular