ಬೆಂಗಳೂರು: ರಾಜ್ಯದ ಜನರಲ್ಲಿ ಅಡುಗೆ ಎಣ್ಣೆಯಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆ ತಡೆಯುವ ನಿಟ್ಟಿನಲ್ಲಿ ಆರು ತಿಂಗಳಿಗೊಮ್ಮೆ ಅಡುಗೆ ಎಣ್ಣೆ ವಿಶ್ಲೇಷಣೆಗೆ ಒಳಪಡಿಸಲು ಸೂಚನೆ ನೀಡಲಾಗಿದೆ.
ಹೌದು, ಅಡುಗೆ ಎಣ್ಣೆಯನ್ನು ಪ್ರತಿ ಆರು ತಿಂಗಳಿಗೊಮ್ಮೆ ವಿಶ್ಲೇಷಣೆಗೆ ಒಳಪಡಿಸಬೇಕು ಎಂದು ಆಹಾರ ಸುರಕ್ಷತಾ ಇಲಾಖೆಯಿಂದ ಅಡುಗೆ ಎಣ್ಣೆ ಉದ್ದಿಮೆದಾರರಿಗೆ ಸೂಚನೆ ನೀಡಲಾಗಿದೆ.
ಬುಧವಾರ ವರ್ಚುಯಲ್ ಸಭೆಯಲ್ಲಿ ಅಡುಗೆ ಎಣ್ಣೆ ತಯಾರಿಕಾ ಘಟಕದ ಮಾಲೀಕರು, ಹೋಟೆಲ್, ಬೇಕರಿ ಉತ್ಪನ್ನಗಳ ತಯಾರಿಕಾ ಸಂಘದ ಪದಾಧಿಕಾರಿಗಳು, ಉಪಯೋಗಿಸಿದ ಅಡುಗೆ ಮಾಲೀಕರು, ರಾಜ್ಯ ಜೈವಿಕ ಅನಿಲ ಅಭಿವೃದ್ಧಿ ಮಂಡಳಿ ಪ್ರತಿನಿಧಿಗಳು ಭಾಗವಹಿಸಿದ್ದ ಸಭೆಯಲ್ಲಿ ಚರ್ಚೆ ನಡೆಸಿ ಈ ಕುರಿತಾಗಿ ಆಹಾರ ಸುರಕ್ಷತಾ ಇಲಾಖೆ ಸೂಚನೆ ನೀಡಿದೆ.