HomeKarnatakaBREAKING : 'ಪೆನ್ ಡ್ರೈವ್' ಹಿಡಿದು ಸದನಕ್ಕೆ ಆಗಮಿಸಿ ಮತ್ತೊಂದು ಹೊಸ ಬಾಂಬ್ ಸಿಡಿಸಿದ HDK

BREAKING : ‘ಪೆನ್ ಡ್ರೈವ್’ ಹಿಡಿದು ಸದನಕ್ಕೆ ಆಗಮಿಸಿ ಮತ್ತೊಂದು ಹೊಸ ಬಾಂಬ್ ಸಿಡಿಸಿದ HDK

ಬೆಂಗಳೂರು; ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ಮುಂದುವರೆಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಇದೀಗ ಪೆನ್ ಡ್ರೈವ್ ಬಾಂಬ್ ಸಿಡಿಸಿದ್ದಾರೆ.

ಪೆನ್ ಡ್ರೈವ್ ಹಿಡಿದೇ ಸದನಕ್ಕೆ ಆಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ವರ್ಗಾವಣೆ ದಂಧೆ ಬಗ್ಗೆ ನನ್ನ ಬಳಿ ಸಾಕ್ಷಿಗಳಿವೆ ಎಂದು ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ವರ್ಗಾವಣೆ ದಂಧೆಯ ದಾಖಲೆ ಈ ಪೆನ್ ಡ್ರೈವ್ ನಲ್ಲಿದೆ. ಆಡಿಯೋ ದಾಖಲೆಗಳು ಇದರಲ್ಲಿವೆ. ಸಮಯ ಬಂದಾಗ ಪೆನ್ ಡ್ರೈವ್ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾನೇನು ಕೆ ಎಸ್ ಟಿ ಟ್ಯಾಕ್ಸ್ ಅಂತ ಇಟ್ಟುಕೊಂಡಿದ್ನಾ? ತಾಜ್ ವೆಸ್ಟ್ ಎಂಡ್ ಬಿಲ್ ನ್ನು ಕಾಂಗ್ರೆಸ್ ನವರಿಗೇನಾದ್ರೂ ಕಳುಹಿಸಿದ್ರಾ? ನಾನೇನು ಬೀದಿಯಲ್ಲಿ ಹೋಗುವವನಾ? 2-3 ಲಕ್ಷ ಖರ್ಚು ಮಾಡುವ ಯೋಗ್ಯತೆ ನನಗಿಲ್ವಾ? ನನ್ನ ಆಸ್ತಿ ಬಗ್ಗೆಯೂ ಸರ್ಕಾರ ತನಿಖೆಯನ್ನು ಮಾಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular