HomeKarnatakaಆಡೋ ಹೈಕ್ಳಿಗೆ ಅಧಿಕಾರ ಕೊಟ್ರೆ ಹೊಡೆ ಗದ್ದೆ ಕೊಯ್ದಿದ್ದರಂತೆ, ಕುಮಾರಣ್ಣ ಜೆಡಿಎಸ್ ಮಾರಾಯ್ತು: ಡಿಸಿಎಂ ಡಿಕೆ

ಆಡೋ ಹೈಕ್ಳಿಗೆ ಅಧಿಕಾರ ಕೊಟ್ರೆ ಹೊಡೆ ಗದ್ದೆ ಕೊಯ್ದಿದ್ದರಂತೆ, ಕುಮಾರಣ್ಣ ಜೆಡಿಎಸ್ ಮಾರಾಯ್ತು: ಡಿಸಿಎಂ ಡಿಕೆ

ಮೈಸೂರು: ಆಡೋ ಹೈಕಳಿಗೆ ಅಧಿಕಾರ ಕೊಟ್ಟರೆ ಹೊಡೆ ಗದ್ದೆ ಕೊಯ್ದಿದ್ದರಂತೆ, ನಿಮ್ಮ ಪಾರ್ಟಿ ಕುಮಾರಣ್ಣ ಮಾರಿದ್ದಾರೆ. ಕಾಂಗ್ರೆಸ್ ಪಕ್ಷ ಸೇರಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್ ಬಗ್ಗೆ ಮಾತನಾಡುವುದು ಬೇಡ ಬಿಡಿ. ಜೆಡಿಎಸ್ ವರಿಷ್ಠ ದೇವೇಗೌಡರು ಕುಮಾರಸ್ವಾಮಿಗೆ ಅಧಿಕಾರ ಕೊಟ್ಟರು. ಈಗ ಜೆಡಿಎಸ್ ಅನ್ನು ಕುಮಾರಸ್ವಾಮಿ ಬಿಜೆಪಿಗೆ ಮಾರಿಬಿಟ್ಟಿದ್ದಾರೆ ಎಂದು ಕುಮಾರಸ್ವಾಮಿ ಮತ್ತು ಜೆಡಿಎಸ್ ಬಗ್ಗೆ ಲೇವಡಿ ಮಾಡಿದ್ದಾರೆ.

ಇನ್ನು ಮುಂದೆ ದಳ ಇರುವುದಿಲ್ಲ. ಕುಮಾರಣ್ಣ ನಿಮ್ಮ ಪಾರ್ಟಿ ಮಾರಿ ಆಗೋಯ್ತು, ಜನತಾ ಪಕ್ಷವನ್ನು ಕುಮಾರಸ್ವಾಮಿ ಅಡಮಾನ ಇಟ್ಟಾಯ್ತು, ಜನತಾದಳ ಕಾರ್ಯಕರ್ತರು ಕಾಂಗ್ರೆಸ್ ಸೇರಲಿ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾನು ವಿಷ ಹಾಕಿದ್ದೇನೆ ಎಂದು ಕುಮಾರಸ್ವಾಮಿ ಹೇಳುತ್ತಾರೆ. ತಮ್ಮ ಸರ್ಕಾರ ಬೀಳಿಸಿದವರನ್ನೇ ಆದಿ ಚುಂಚನಗಿರಿ ಮಠಕ್ಕೆ ಕರೆದುಕೊಂಡು ಹೋಗಿದ್ದಾರೆ. ನಿಮಗೆ ಮಾನ ಮರ್ಯಾದೆ ಬೇಡವಾ ಎಂದು ಹೆಚ್.ಡಿ.ಕೆ. ವಿರುದ್ಧ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲಿಯೇ ಮೋದಿ ಅಲೆ ಇಲ್ಲ. ರಾಜ್ಯದಲ್ಲಿ ಶೇಕಡ 82 ರಷ್ಟು ಮಹಿಳೆಯರು ಕಾಂಗ್ರೆಸ್ ಪರವಾಗಿದ್ದಾರೆ. ಸೂರ್ಯ ಮುಳುಗುವುದು ನಿಶ್ಚಿತ ಹೇಗೋ ಕಮಲ ಬಾಡುವುದು ಖಚಿತ ಎಂದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular