ಪ್ರಗತಿವಾಹಿನಿ ಸುದ್ದಿ: ಒಂದೆಡೆ ಕೈಕೊಟ್ಟ ಮುಂಗಾರು, ಬಿತ್ತಿದ ಬೆಳೆ ಮೊಳಕೆಯಲ್ಲಿಯೇ ಹೊಲದಲ್ಲೇ ಒಣಗುತ್ತಿದೆ. ಮತ್ತೊಂದೆಡೆ ಸಾಲಬಾಧೆಯಿಂದ ರೈತರು ಕಂಗೆಟ್ಟು ಹೋಗಿದ್ದಾರೆ. ಇಂತಹ ಸಂದರ್ಭದಲ್ಲೆ ಬ್ಯಾಂಕ್ ನಿಂದ ಬಂದ ನೋಟಿಸ್ಗೆ ಹೆದರಿ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಹಾವೇರಿ ತಾಲೂಕಿನ ತಿಮ್ಮೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ತಿಮ್ಮನಹಳ್ಳಿ ಗ್ರಾಮದ ರೈತ ಸೋಮನಗೌಡ ಮುದಿಗೌಡರ (44) ಆತ್ಮಗತ್ಯೆ ಮಾಡಿಕೊಂಡ ದುರ್ದೈವಿ. ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮುಂಗಾರು ಕೈಕೊಟ್ಟು ಬೆಳೆ ನಾಶವಾಗಿದ್ದರಿಂದ ಹಾಗೂ 10 ಲಕ್ಷ ರೂ. ಅಧಿಕ ಸಾಲ ತೀರಿಸುವಂತೆ ಬ್ಯಾಂಕ್ ನೋಟಿಸ್ ಬಂದಿದ್ದರಿಂದ ಮನನೊಂದು ಜಮೀನಿನಲ್ಲಿಯೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಗುತ್ತಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

