HomeKarnataka'ಬೆಂಗಳೂರು ಏರ್ ಶೋ'ಗೆ ಹೋಗ್ತಿದ್ದೀರಾ..? ಟಿಕೆಟ್ ದರ ಎಷ್ಟು..ಬುಕ್ ಮಾಡೋದು ಹೇಗೆ ತಿಳಿಯಿರಿ.!

‘ಬೆಂಗಳೂರು ಏರ್ ಶೋ’ಗೆ ಹೋಗ್ತಿದ್ದೀರಾ..? ಟಿಕೆಟ್ ದರ ಎಷ್ಟು..ಬುಕ್ ಮಾಡೋದು ಹೇಗೆ ತಿಳಿಯಿರಿ.!

ಬೆಂಗಳೂರು : ಫೆ.10 ರಿಂದ ಬೆಂಗಳೂರಿನಲ್ಲಿ ಏರ್ ಶೋ ಆರಂಭವಾಗಲಿದ್ದು, ನೀವು ಕೂಡ ಹೋಗಬಹುದು. ಟಿಕೆಟ್ ದರ ಎಷ್ಟು..? ಬುಕ್ಕಿಂಗ್ ಹೇಗೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಏರ್ ಶೋ 2025 ಫೆಬ್ರವರಿ 10ರಿಂದ ಫೆಬ್ರವರಿ 14ರ ವರೆಗೆ ಪ್ರತಿದಿನವೂ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ನಡೆಯಲಿದೆ. ಏರ್ ಶೋದಲ್ಲಿ ಬೆಳಿಗ್ಗೆಯಿಂದ ಸಂಜೆಯ ವರೆಗೆ ಸುತ್ತಾಡುವುದಕ್ಕೆ ಅವಕಾಶ ಇರಲಿದೆ. ಫೆಬ್ರವರಿ 13 ಹಾಗೂ 14ರಂದು ಸಾರ್ವಜನಿಕರಿಗೆ ಅವಕಾಶ ಇರಲಿದೆ.

ಟಿಕೆಟ್ ದರ ಎಷ್ಟು..?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತೀಯರಿಗೆ 2,500 ರೂಪಾಯಿ ಇದ್ದರೆ, ವಿದೇಶಿಗರಿಗೆ ಯುಎಸ್ ಡಾಲರ್ 50 ಇರಲಿದೆ. ಎಡಿವಿಎ ಪಾಸ್: ಭಾರತೀಯರಿಗೆ 1,000 ರೂ | ವಿದೇಶಿಗರಿಗೆ ಯುಎಸ್ ಡಾಲರ್ 50 ಇರಲಿದೆ. ವ್ಯಾಪಾರ ಪಾಸ್: ಭಾರತೀಯರಿಗೆ 5,000 ಸಾವಿರ ಹಾಗೂ ವಿದೇಶಿಗರಿಗೆ ಯುಎಸ್ ಡಾಲರ್ 50 ಇರಲಿದೆ.

ಟಿಕೆಟ್ ಬುಕ್ ಮಾಡೋದು ಹೇಗೆ..?

1) ನೀವು ಏರೋ ಇಂಡಿಯಾದ ಅಧಿಕೃತ ವೆಬ್ಸೈಟ್ ataeroindia.gov.in.ಗೆ ಭೇಟಿ ನೀಡಿ *
2) ವೆಬ್ಸೈಟ್ನ ಹೋಮ್ ಪೇಜ್ನಲ್ಲಿ ಕಾಣಿಸುವ ಸಂದರ್ಶಕರ ನೋಂದಣಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
3) ನಿಮಗೆ ಯಾವ ಮಾದರಿಯ ಪಾಸ್ ಬೇಕು ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4) ನಿಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆ ಮತ್ತು ಅಗತ್ಯ ವಿವರಗಳನ್ನು ನಮೂದಿಸಿ.
5) ಟಿಕೆಟ್ ಮೊತ್ತವನ್ನು ಪಾವತಿ ಮಾಡಿ ಹಾಗೂ ಸಲ್ಲಿಸು ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಇದಾದ ಮೇಲೆ ನಿಮಗೆ ಏರೋ ಇಂಡಿಯಾ 2025ರ ಪಾಸ್ ಸಿಗಲಿದೆ. ಇನ್ನು ಹೆಚ್ಚಿನ ಮಾಹಿತಿ ಅಥವಾ ವಿವರಗಳಿಗೆ ಅಧಿಕೃತ ಏರೋ ಇಂಡಿಯಾ ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular