HomeLatest Newsಬೆಳಗಿನ ತಿಂಡಿಗೆ ಇರಲಿ ಗರಿ ಗರಿ ತೆಂಗಿನಕಾಯಿ ದೋಸೆ

ಬೆಳಗಿನ ತಿಂಡಿಗೆ ಇರಲಿ ಗರಿ ಗರಿ ತೆಂಗಿನಕಾಯಿ ದೋಸೆ

 

ದೋಸೆ ದಕ್ಷಿಣ ಭಾರತದ ಜನಪ್ರಿಯ ತಿಂಡಿ. ಈಗ ಉತ್ತರದಲ್ಲೂ ಸಿಕ್ಕಾಪಟ್ಟೆ ಫೇಮಸ್‌ ಆಗಿದೆ. ರುಚಿಯ ಜೊತೆಗೆ ಆರೋಗ್ಯಕ್ಕೂ ಹಿತವಾಗಿರುತ್ತದೆ. ಸಾಕಷ್ಟು ವೆರೈಟಿಯ ದೋಸೆಗಳಿವೆ. ಇವತ್ತು ನಾವ್‌ ನಿಮಗೆ ಪರಿಚಯಿಸ್ತಿರೋದು ತೆಂಗಿನಕಾಯಿ ದೋಸೆ.

ಬೇಕಾಗುವ ಸಾಮಗ್ರಿ: 2 ಕಪ್‌ ಅಕ್ಕಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಎಣ್ಣೆ, ಅರ್ಧ ಚಮಚ ಮೆಂತ್ಯ, ಅರ್ಧ ಚಿಪ್ಪು ತೆಂಗಿನ ಕಾಯಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ: ಎರಡು ಕಪ್‌ ಅಕ್ಕಿಯನ್ನು ಚೆನ್ನಾಗಿ ತೊಳೆದು 3 ಗಂಟೆಗಳ ಕಾಲ ನೆನೆಸಿಡಿ, ಅರ್ಧ ಚಮಚ ಮೆಂತ್ಯ ಮತ್ತು ತೆಂಗಿನ ತುರಿಯನ್ನು ಪ್ರತ್ಯೇಕವಾಗಿ ನೆನೆಸಿ. ತೆಂಗಿನ ತುರಿ, ಮೆಂತ್ಯ ಮತ್ತು ಅಕ್ಕಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ದೋಸೆ ಹಿಟ್ಟಿನ ಹದಕ್ಕೆ ತಯಾರಿಸಿಕೊಳ್ಳಿ. ಉಪ್ಪು ಹಾಕಿ ಕಲಸಿ. ಈ ಹಿಟ್ಟನ್ನು 2-3 ಗಂಟೆಗಳ ಕಾಲ ಹಾಗೇ ಬಿಡಿ. ನಂತರ ನಾನ್‌ ಸ್ಟಿಕ್‌ ಕಾವಲಿ ಮೇಲೆ ದೋಸೆ ಹುಯ್ಯಿರಿ. ಗರಿ ಗರಿ ಆಗುವ ವರೆಗೂ ಬೇಯಿಸಿ. ಕಾಯಿ ಚಟ್ನಿ ಹಾಗೂ ಸಾಂಬಾರ್‌ ಜೊತೆಗೆ ದೋಸೆಯನ್ನು ಸವಿಯಿರಿ.

For Latest News Updates, Join Our Whatsapp Community🚩
RELATED ARTICLES

Most Popular