HomeInternationalಮನೆಯಲ್ಲಿ ಕೇಳಿ ಬರ್ತಿದೆ ವಿಚಿತ್ರ ಶಬ್ಧ…...! ವಸ್ತುವೆಲ್ಲ ಚೆಲ್ಲಾಪಿಲ್ಲಿ..…! ಇದು ಗೊಂಬೆ ಭೂತ

ಮನೆಯಲ್ಲಿ ಕೇಳಿ ಬರ್ತಿದೆ ವಿಚಿತ್ರ ಶಬ್ಧ……! ವಸ್ತುವೆಲ್ಲ ಚೆಲ್ಲಾಪಿಲ್ಲಿ..…! ಇದು ಗೊಂಬೆ ಭೂತ

Agnes the doll

ಆ ಮನೆಯಲ್ಲಿ ಭೂತವಿದೆ, ಆ ಕಾಡಿನಲ್ಲಿ ಭೂತವಿದೆ ಎನ್ನುವ ಮಾತನ್ನು ನಾವು ಕೇಳ್ತಿರುತ್ತೇವೆ. ಕೆಲವೊಮ್ಮೆ ಗೊಂಬೆಯಲ್ಲೂ ಆತ್ಮ, ಭೂತಗಳಿವೆ ಎನ್ನುವ ಮಾತು ಬರ್ತಿರುತ್ತದೆ. ಈಗ ಸ್ಕಾಟ್ಲೆಂಡ್‌ನ ಮಹಿಳೆಯೊಬ್ಬರು ಗೊಂಬೆಯಲ್ಲಿ ಭೂತ ಇದೆ ಎನ್ನುತ್ತಿದ್ದಾರೆ.

ಯವೋನ್ ಹೈಡ್ಸ್ ಹೆಸರಿನ ಮಹಿಳೆಗೆ ಉಡುಗೊರೆಯಾಗಿ ಸಿಕ್ಕ ಗೊಂಬೆಯಲ್ಲಿ ಭೂತವಿರುವುದು ಕಂಡು ಬಂದಿದೆಯಂತೆ. ಯವೋನ್ ಹೈಡ್ಸ್, ಸ್ಕಾಟಿಷ್ ಘೋಸ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಭೂತಗಳ ಬಗ್ಗೆ ಭಯವಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭೂತಗಳನ್ನು ಹುಡುಕುವ ಗುಂಪೊಂದು ಅವರಿಗೆ ಈ ಗೊಂಬೆಯನ್ನು ಉಡುಗೊರೆಯಾಗಿ ನೀಡಿದೆ. ಈ ಉಡುಗೊರೆ ಸ್ವೀಕರಿಸಿ ಮನೆಗೆ ತಂದ ಯವೋನ್ ಸಾಕಷ್ಟು ಚಿತ್ರ – ವಿಚಿತ್ರ ಘಟನೆಗಳನ್ನು ನೋಡಿದ್ದಾಳೆ. ಆಕೆ ಮೊದಲ ಬಾರಿ ಗೊಂಬೆ ಕಣ್ಣು ಮಿಟುಕಿಸುವುದನ್ನು ನೋಡಿದಳಂತೆ. ಇದನ್ನು ನೋಡಿದ ಆಕೆ ಪತಿ ಹಾಗೂ ಸಾಕುನಾಯಿ ಭಯಗೊಂಡಿದ್ದರಂತೆ.
ಮನೆ ಮಹಡಿ ಮೇಲೆ ಯಾರೋ ನಡೆಯುವ ಶಬ್ಧ ಕೇಳುತ್ತಿತ್ತಂತೆ. ಕೆಲವೊಮ್ಮೆ ವಿಚಿತ್ರ ಕೂಗು ಕೇಳಿಸುತ್ತದೆಯಂತೆ. ಮನೆಯಲ್ಲಿರುವ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದವಂತೆ. ಭಾರದ ವಸ್ತುವೊಂದನ್ನು ಮನೆಯ ಮಧ್ಯ ಜಾಗದಲ್ಲಿ ತಂದಿಡಲಾಗಿತ್ತಂತೆ. ಈ ಗೊಂಬೆ ಕಾಟಕ್ಕೆ ಬೇಸತ್ತ ಯವೋನ್, ಈ ವಿಷ್ಯವನ್ನು ಸ್ನೇಹಿತರಿಗೆ ಹೇಳಿದ್ದಾರೆ. ಸ್ನೇಹಿತರೊಬ್ಬರು ಗೊಂಬೆಯನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಅವರಿಗೂ ಇದೇ ಅನುಭವವಾಗಿದ್ದರಿಂದ ಈ ವಿಷ್ಯವನ್ನು ಭೂತ ಪತ್ತೆ ಟೀಂಗೆ ಹೇಳಿದ್ದಾರೆ.

ಗೊಂಬೆಯನ್ನು ಪಾರ್ಕ್ ಗೆ ತೆಗೆದುಕೊಂಡು ಹೋಗಿ ಅದ್ರಲ್ಲಿ ಆತ್ಮವಿದ್ಯೆ ಎಂದು ಪರೀಕ್ಷೆ ಮಾಡಲಾಗಿದೆ. ಆಗ ಕೆಲವರಿಗೆ ಗೊಂಬೆ ಕಣ್ಣು ಮಿಟುಕಿಸಿದ್ದು ಬಿಟ್ಟರೆ ಮತ್ತೇನೂ ಕಾಣಲಿಲ್ಲ. ಆತ್ಮ, ಭೂತಗಳೆಲ್ಲ ಕೆಟ್ಟವಲ್ಲ. ಈ ಭೂತ ಚೇಷ್ಠೆ ಮಾಡುತ್ತದೆ ಅಷ್ಟೆ ಎಂದು ಯವೋನ್ ಹೇಳಿದ್ದಾರೆ. ಸದ್ಯ ಗೊಂಬೆಯನ್ನು ಕಾರಿನಲ್ಲಿಟ್ಟಿರುವ ಯವೋನ್, ಕಾರಿನಲ್ಲಿದ್ದಾಗ ಅದು ಶಾಂತವಾಗಿರುತ್ತದೆ ಎಂದಿದ್ದಾರೆ. ಮತ್ತೆ ಅದನ್ನು ಮನೆಗೆ ತರುವ ಆಸಕ್ತಿಯನ್ನು ಯವೋನ್ ತೋರಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular