HomeLatest NewsBIG NEWS: ಹಟ್ಟಿ ಚಿನ್ನದ ಗಣಿಯಲ್ಲಿ ಸ್ಫೋಟ: ಓರ್ವ ಕಾರ್ಮಿಕ ದುರ್ಮರಣ; ಗಣಿಯಲ್ಲಿ ಹಲವರು ಸಿಲುಕಿರುವ...

BIG NEWS: ಹಟ್ಟಿ ಚಿನ್ನದ ಗಣಿಯಲ್ಲಿ ಸ್ಫೋಟ: ಓರ್ವ ಕಾರ್ಮಿಕ ದುರ್ಮರಣ; ಗಣಿಯಲ್ಲಿ ಹಲವರು ಸಿಲುಕಿರುವ ಶಂಕೆ

ರಾಯಚೂರು: ಹಟ್ಟಿಚಿನ್ನದ ಗಣಿಯಲ್ಲಿ ಏರ್ ಬ್ಲಾಸ್ಟ್ ಆಗಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ನಡೆದಿದೆ.

ಹಟ್ಟಿ ಚಿನ್ನದ ಗಣಿಯ ಸುಮಾರು 2800 ಅಡಿ ಆಳದಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ವೇಳೆ ರ‍್ ಬ್ಲಾಸ್ಟ್ ಆಗಿದ್ದು, ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾರೆ. ಮತ್ತೋರ್ವ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ.

ಶರಣಬಸವ (40) ಮೃತ ದುರ್ದೈವಿ. ಗಾಯಾಳು ಕಾರ್ಮಿಕನನ್ನು ನಿರುಪಾದಿ ಎಂದು ಗುರುತಿಸಲಾಗಿದೆ. ಗಾಯಾಳು ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿನ್ನದ ಗಣಿಯಲ್ಲಿ ಇನ್ನಷ್ಟು ಕಾರ್ಮಿಕರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular