HomeLatest NewsBIG NEWS: ಕರೆಂಟ್ ಶಾಕ್ ಹೊಡೆದು ಮತ್ತೋರ್ವ ಲೈನ್ ಮೆನ್ ಸಾವು

BIG NEWS: ಕರೆಂಟ್ ಶಾಕ್ ಹೊಡೆದು ಮತ್ತೋರ್ವ ಲೈನ್ ಮೆನ್ ಸಾವು

ಬೆಳಗಾವಿ: ವಿದ್ಯುತ್ ಅವಘಡಕ್ಕೆ ಮತ್ತೋರ್ವ ವ್ಯಕ್ತಿ ಬಲಿಯಾಗಿದ್ದಾರೆ. ಟಿಪಿ ಬಾಕ್ಸ್ ನಿಂದ ವಿದ್ಯುತ್ ಪ್ರವಹಿಸಿ ಲೈನ್ ಮೆನ್ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಇಲ್ಲಿನ ಜೈತನಾಳ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ರಾಹುಲ್ ಪಾಟೀಲ್ (೩೦) ಮೃತ ದುರ್ದೈವಿ. ಯಳ್ಳೂರು ಗ್ರಾಮದ ನಿವಾಸಿಯಾಗಿರುವ ರಾಹುಲ್, ಐಪಿ ರೀಡಿಂಗ್ ಮಾಡುವ ವೇಳೆ ಟಿಪಿಯಿಂದ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular