HomeLatest NewsBIG NEWS: ಮಾಜಿ ಸೈನಿಕನಿಂದ ಮೂವರ ಮೇಲೆ ಮಾರಣಾಂತಿಕ ಹಲ್ಲೆ

BIG NEWS: ಮಾಜಿ ಸೈನಿಕನಿಂದ ಮೂವರ ಮೇಲೆ ಮಾರಣಾಂತಿಕ ಹಲ್ಲೆ

ಹಾಸನ: ಮಾಜಿ ಸೈನಿಕನೊಬ್ಬ ಕುಟುಂಬವೊಂದರ ಮೇಲೆ ಮಾರಕಾಸ್ತ್ರದಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಗ್ರಾಮದಲ್ಲಿ ನಡೆದಿದೆ.

ಶೇಖರ್ (54), ಪತ್ನಿ ಪ್ರೇಮಕುಮಾರಿ (48) ಹಾಗೂ ಅವರ ಪುತ್ರ ವೆಂಕಟೇಶ್ (29) ಎಂಬವರ ಮೇಲೆ ತೀವ್ರ ಹಲ್ಲೆ ನಡೆಸಲಾಗಿದೆ. ಮಾಜಿ ಸೈನಿಕ ವೆಂಕಟೇಶ್ (46), ಪತ್ನಿ ರಾಣಿ (36) ಹಾಗೂ ಸಹೋದರಿ ರತ್ನ ಹಲ್ಲೆ ಮಾಡಿದ ಆರೋಪಿಗಳು. ಆಸ್ತಿ ವಿಚಾರಕ್ಕೆ ಸಮ್ಬಂಧಿಸಿದಂತೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಲ್ಲೆಗೊಳಗಾದವರು ಮತ್ತು ಆರೋಪಿಗಳು ದಾಯಾದಿಗಳು. ಶೇಖರ್ ಅವರ 7 ಎಕರೆ ಜಮೀನಿನಲ್ಲಿ ಒಂದು ಎಕರೆಯಷ್ಟು ಜಾಗವನ್ನು 6-7 ವರ್ಷದಿಂದ ಆರೋಪಿ ವೆಂಕಟೇಶ್​ ಮತ್ತು ಅವರ ತಂದೆ ಕೇಶವೇಗೌಡ ಎಂಬವರು ಒತ್ತುವರಿ ಮಾಡಿಕೊಂಡು ಉಳುಮೆ ಮಾಡುತ್ತಿದ್ದರು. ಇತ್ತೀಚೆಗಷ್ಟೇ ಜಮೀನನ್ನು ಕಾನೂನು ರೀತಿಯಲ್ಲಿ ಸರ್ವೇ ಮಾಡಿಸಿ ಒತ್ತುವರಿ ತೆರವುಗೊಳಿಸಲಾಗಿತ್ತು. ಒತ್ತುವರಿ ಜಮೀನು ತೆರವುಗೊಳಿಸುವ ವೇಳೆ ಯಾವುದೇ ತಂಟೆ ತಕರಾರು ಮಾಡದೇ, ಕೇಶವೇಗೌಡ ಮತ್ತು ಆರೋಪಿ ಮಾಜಿ ಸೈನಿಕ ವೆಂಕಟೇಶ್ ಜಮೀನನ್ನು ಬಿಟ್ಟುಕೊಟ್ಟಿದ್ದರು.

ಆದರೆ ಈಗ ಮಾಜಿ ಸೈನಿಕನ ಪತ್ನಿ ರಾಣಿ ವೆಂಕಟೇಶ್​ ಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದಾರೆ. ಮನೆಗೆ ಬಂದ ವೆಂಕಟೇಶ್ ಜೊತೆ ಜಮೀನು ವಿಚಾರವಾಗಿ ಮಾತನಾಡಿದ್ದು, ಈ ವೇಳೆ ಏಕಾಏಕಿ ಆರೋಪಿ ಸೈನಿಕ ವೆಂಕಟೇಶ್ ಹಲ್ಲೆ ಮಾಡಿದ್ದಾರೆ. ಆಗ ಗಾಯಗೊಂಡ ವೆಂಕಟೇಶ್ ತಕ್ಷಣ ಫೋನ್ ಮಾಡಿ ತನ್ನ ಪೋಷಕರಿಗೆ ತಿಳಿಸಿದ್ದಾನೆ. ಬಳಿಕ, ಸ್ಥಳಕ್ಕೆ ಆಗಮಿಸಿದ ಪೋಷಕರ ಮೇಲೆಯೂ ಸೈನಿಕ ವೆಂಕಟೇಶ್, ಪತ್ನಿ ರಾಣಿ ಮತ್ತು ಸಹೋದರಿ ರತ್ನ ಅವರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೂವರನ್ನು ಸ್ಥಳೀಯ ಗೆಳೆಯರು ಹಾಗೂ ಸಾರ್ವಜನಿಕರು ತಕ್ಷಣವೇ ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಮಾರಣಾಂತಿಕವಾಗಿ ಹಲ್ಲೆ ಮಾಡಿದ ಆರೋಪಿ ಮಾಜಿ ಸೈನಿಕ ವೆಂಕಟೇಶ್ ಇತ್ತೀಚೆಗಷ್ಟೇ ತಮಿಳುನಾಡಿನ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದರು. ಅಲ್ಲದೇ ಒಂದೂವರೆ ದಶಕಗಳ ಕಾಲ ದೇಶ ಸೇವೆ ಮಾಡಿ, ನಿವೃತ್ತಿ ಹೊಂದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular